Saturday, November 16, 2024
ಪುತ್ತೂರು

ಪುತ್ತೂರಿನಲ್ಲಿ ಮಹಿಳಾ ಠಾಣಾ ಎಸ್.ಐ ಮೇಲೆ ಹಲ್ಲೆ ನಡೆಸಿದ ಅಕ್ಕ – ತಂಗಿ; ಆರೋಪಿಗಳ ಬಂಧನ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಮಹಿಳಾ ಠಾಣಾ ಎಸ್.ಐ ಸೇಸಮ್ಮ ಮೇಲೆ ದೂರು ಅರ್ಜಿಯೊಂದರ ವಿಚಾರಣೆಯ ವೇಳೆ ಹಲ್ಲೆ ನಡೆಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ಮಾರ್ಚ್ 1ರಂದು ನಡೆದಿದ್ದು, ಬಂಧಿಸಿದ ಆರೋಪಿಗಳನ್ನು ಸಾಲ್ಮರ ಮುದ್ದೋಡಿ ನಿವಾಸಿ 34 ವರ್ಷದ ಲಾರೆನ್ಸ್ ಡಿ’ಸೋಜ ಅವರ ಪತ್ನಿ ಬೇಬಿ ಡಿಸೋಜ ಮತ್ತು ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ 35ವರ್ಷದ ಆಶಾ ಎಂದು ಗುರುತಿಸಲಾಗಿದೆ. ಹಲ್ಲೆ ಘಟನೆಯ ಬಳಿಕ ಎಸ್.ಐ ಸೇಸಮ್ಮ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಘಟನೆ  ಸಂಬಂಧಿಗಳಾದ ಸುನಿತಾ ಡಿ’ಸೋಜಾ ಮತ್ತು ಬೇಬಿ ಡಿಸೋಜಾ ಎಂಬಿಬ್ಬರು, ಒಬ್ಬರಿಗೊಬ್ಬರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಬೇಬಿ ಡಿಸೋಜ ಅವರ ಅಕ್ಕ, ಹಾಸನದಲ್ಲಿರುವ ಆಶಾ ಅವರ ಜೊತೆಗೂಡಿ ಬಂದಿದ್ದರು. ಕೌಟುಬಿಕ ಕಲಹದ ಈ ಅರ್ಜಿಯನ್ನು ಎಸ್.ಐ ಅವರು ನಯವಾಗಿ ವಿಚಾರಿಸುತ್ತಿರುವಾಗ ಬೇಬಿ ಡಿಸೋಜಾ ಅವರ ಪತಿ ಲಾರೆನ್ಸ್ ಡಿ’ಸೋಜಾ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ತಡೆಯಲು ಬಂದ ಎಸ್.ಐ ಸೇಸಮ್ಮ ಅವರ ಮೇಲೆ ಬೇಬಿ ಡಿಸೋಜ ಮತ್ತು ಆಕೆಯ ಅಕ್ಕ ಆಶಾ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬೇಬಿ ಡಿಸೋಜ ಮತ್ತು ಆಶಾ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು