ಸುಳ್ಯ : ಕೊವೀಡ್ ಮುನ್ನೆಚ್ಚರಿಕಾ ಕ್ರಮವಾಗಿ ಸಂಪಾಜೆ ಗೇಟ್‍ನಲ್ಲಿ ಹೊರ ರಾಜ್ಯದಿಂದ ಆಗಮಿಸುತ್ತಿರುವ ಪ್ರಯಾಣಿಕರ ತಪಾಸಣೆ ಕಾರ್ಯ ಬಿಗಿಗೊಂಡ ಕಾರಣ ಸಂಪಾಜೆ ಗೇಟ್ ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಕೇರಳದಲ್ಲಿ ಕೊವೀಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ತಪಾಸಣೆ ನಡೆಸುವಂತೆ ಕೊಡಗು ಜಿಲ್ಲಾಧಿಕಾರಿ ಆದೇಶ ನೀಡಿದ ಹಿನ್ನಲೆಯಲ್ಲಿ ನಿನ್ನೆ ಮುಂಜಾನೆಯಿಂದಲೇ ಸಂಪಾಜೆ ಗೇಟಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಕೋವಿಡ್ ಪರೀಕ್ಷೆಯ ವರದಿ ತಂದ ಬಳಿಕ ಹೊರರಾಜ್ಯದ ವಾಹನಗಳಿಗೆ ಕರ್ನಾಟಕದ ಕೊಡಗಿಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಕೊಡಗಿನ ಎಮ್ಮೆಮಾಡು ಊರುಸ್ ಗೆ ಕೇರಳದಿಂದ ಅತಿಹೆಚ್ಚು ಜನರು ವಾಹನಗಳಲ್ಲಿ ಬರುತ್ತಿದ್ದು, ಕೇರಳ ರಿಜೆಜಿಸ್ಟ್ರೇಶನಿನ ವಾಹನಗಳನ್ನು ಕೊಡಗು ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ತಡೆದು ನಿಲ್ಲಿಸಲಾಗುತ್ತಿದೆ.