ಮಂಗಳೂರಿನಲ್ಲಿ ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಸ್ಪೆಂಡ್-ಕಹಳೆ ನ್ಯೂಸ್
ಮಂಗಳೂರು : ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದಾರೆ.
ಇಬ್ಬರನ್ನು ಅಮಾನತುಗೊಳಿಸಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದು, ಸಿಸಿಬಿಯಲ್ಲಿದ್ದ ರಾಜ ಹಾಗೂ ಆಶಿತ್ ಡಿಸೋಜ ಎಂಬ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳರಾಜ್ ಮತ್ತು ಪಾಂಡೇಶ್ವರದ ನಾರ್ಕೋಟಿಕ್ ಹಾಗೂ ಆರ್ಥಿಕ ಅಪರಾಧ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ. ಈ ನಡುವೆ ಕಾರು ಮಾರಾಟ ಮತ್ತು ಅದಕ್ಕೆ ಕಾರಣವಾದ ಮನಿ ಡಬ್ಲಿಂಗ್ ಪ್ರಕರಣವನ್ನು ಡಿಜಿಪಿಯವರು ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಒಟ್ಟು ಪ್ರಕರಣದ ಬಗ್ಗೆ ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ನೀಡಿದ ವರದಿಯಂತೆ ಡಿಜಿಪಿ ಕ್ರಮ ಜರುಗಿಸಿದ್ದರು.