Friday, November 15, 2024
ಬೆಂಗಳೂರು

ಹೆಗ್ಗನಹಳ್ಳಿಯ ರಾಜಗೋಪಾಲನಗರದಲ್ಲಿ ಪುತ್ರಿಯರ ಮೇಲೆಯೇ ಕೆಟ್ಟ ಕಣ್ಣಿಟ್ಟಿದ್ದ ಪತಿಯನ್ನು ಸುಪಾರಿ ನೀಡಿ ಕೊಲ್ಲಿಸಿದ ಪತ್ನಿ-ಕಹಳೆ ನ್ಯೂಸ್

ಬೆಂಗಳೂರು : ಹೆಗ್ಗನಹಳ್ಳಿಯ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಪುತ್ರಿಯರೊಂದಿಗೆಯೇ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಪುತ್ರ ಸೇರಿ ಸುಪಾರಿ ನೀಡಿ ಕೊಲ್ಲಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಪತಿಯ ವರ್ತನೆಯಿಂದ ಬೇಸತ್ತು ಸುಪಾರಿ ಕೊಟ್ಟು ತನ್ನ ಪತಿಯನ್ನೇ ಕೊಲ್ಲಿಸಿದ ಪತ್ನಿ ಮತ್ತು ಆಕೆಯ ಪುತ್ರ ಸೇರಿ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹತ್ಯೆಯಾದ ವ್ಯಕ್ತಿ ಹೆಗ್ಗನಹಳ್ಳಿ ನಿವಾಸಿ 52 ವರ್ಷದ ಮೊಹಮ್ಮದ್ ಹಂಜಲ ಎಂದು ತಿಳಿದುಬಂದಿದೆ. ಬಂಧಿತರು ಪತ್ನಿ 42 ವರ್ಷದ ಸರ್ವರಿ ಬೇಗಂ, ಪುತ್ರ 20 ವರ್ಷದ ಶಫಿ ರೆಹಮಾನ್, ಥಣಿಸಂದ್ರದ ನಿವಾಸಿ 21 ವರ್ಷದ ಅಫ್ತಾಬ್, 23 ವರ್ಷದ ಪೀಣ್ಯದ ಸೈಯದ್ ಅವೆಜ್ ಪಾಷಾ ಮತ್ತು 20 ವರ್ಷದ ಮೊಹಮ್ಮದ್ ಸೈಫ್. ಮೃತ ಮೊಹಮ್ಮದ್ ಹಂಜಲ ಚಪ್ಪಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಮೂವರು ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುವ ವೇಳೆ ಮತ್ತು ಸ್ನಾನ ಮಾಡುವಾಗ ಇಣುಕಿ ನೋಡುತ್ತಿದ್ದ. ಈ ರೀತಿ ಮಾಡಬಾರದೆಂದು ಪತ್ನಿ ಎಷ್ಟು ಬಾರಿ ಹೇಳಿದರೂ ಕೂಡಾ ತನ್ನ ಪತ್ನಿಯ ಮಾತು ಕೇಳದ ಪತಿ ತನ್ನ ಅದೇ ದುರ್ವತನೆಯನ್ನು ಮುಂದುವರಿಸಿದ್ದ. ಅಷ್ಟು ಮಾತ್ರವಲ್ಲದೆ ಪತ್ನಿಗೆ ಬೇರೊಬ್ಬರ ಜೊತೆ ಸಂಬಂಧವಿದೆ ಎಂದು ಅನುಮಾನಿಸಿ ಮನೆಯಲ್ಲಿ ಪತ್ನಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ. ಇದೆಲ್ಲದರಿಂದ ತೀವ್ರ ಬೇಸತ್ತ ಪತ್ನಿಯು ತನ್ನ ಪುತ್ರನಾದ ಶಫಿ ರೆಹಮಾನ್ ಜೊತೆ ಸೇರಿ ಅಫ್ತಾಬ್ ಮತ್ತು ಸೈಯದ್ ಅವೆಜ್‍ಗೆ 4.05 ಲಕ್ಷಕ್ಕೆ ಸುಪಾರಿ ನೀಡಿದ್ದಾಳೆ. ಫೆಬ್ರಚರಿ 10 ರಂದು ರಾತ್ರಿ ಪತಿಯ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಊಟ ನೀಡಿದ್ದ ಪತ್ನಿಯು ಆತ ನಿದ್ರೆಗೆ ಜಾರಿದ ಬಳಿಕ ಬೆಳಗಿನ ಜಾವ 3:30 ರ ಸುಮಾರಿಗೆ ಸುಪಾರಿ ನೀಡಿದ ಆರೋಪಿಗಳಿಂದ ಉಸಿರುಗಟ್ಟಿಸಿ ಕೊಲೆ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಇದ್ಯಾವುದೂ ತಾವು ಮಾಡಿಲ್ಲ ಎಂಬುದನ್ನು ಬಿಂಬಿಸಲು ಮಾರನೇ ದಿನ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಏತನ್ಮಧ್ಯೆ ಈ ಸುಪಾರಿ ಹಣ ನೀಡುವುದನ್ನು ತಡ ಮಾಡಿರುವುದೇ ಮೃತನ ಪತ್ನಿ ಹಾಗೂ ಪುತ್ರನಿಗೆ ಕುತ್ತಾಗಿ ಪರಿಣಮಿಸಿದೆ. ಮೊದಲು ಒಂದು ಲಕ್ಷ ನೀಡಿದ್ದ ಅವರು, ಬಳಿಕ ಹಣ ನೀಡಿರಲಿಲ್ಲ. ಈ ವಿಚಾರವನ್ನು ಸುಪಾರಿ ಪಡೆದಿದ್ದ ಅಫ್ತಾಬ್ ಬೇರೊಬ್ಬ ರೌಡಿಶೀಟರ್‌ಗೆ ತಿಳಿಸಿದ್ದು ಕೊನೆಗೆ ಸುಮಾರು 18 ದಿನಗಳ ಬಳಿಕ ಪೊಲೀಸರ ಕಿವಿಗೆ ಬಿದ್ದಿದೆ. ಕೂಡಲೇ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು