Friday, September 20, 2024
ಸುದ್ದಿ

ರಾಷ್ಟ್ರೀಯ ವಿಜ್ಞಾನ ದಿವಸದ ವಿನೂತನ ಆಚರಣೆ-ಕಹಳೆ ನ್ಯೂಸ್

ಮಂಗಳೂರು : ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಸರ್ ಸಿ ವಿ ರಾಮನ್, “ರಾಮನ್ ಪರಿಣಾಮ” ಕಂಡುಹಿಡಿದ ದಿನವಾದ ಫೆಬ್ರವರಿ 28 ರ ಸ್ಮರಣಾರ್ಥ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘ ಮತ್ತು ಪರಿಸರ ಸಂಘದ ವತಿಯಿಂದ ಇತ್ತೀಚೆಗೆ ʼರಾಷ್ಟ್ರೀಯ ವಿಜ್ಞಾನ ದಿನʼವನ್ನು ʼಸರ್ ಸಿ. ವಿ ರಾಮನ್ ದಿನʼವಾಗಿ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಯಾವುದೇ ರೆಕ್ಸಿನ್ ಬ್ಯಾನರ್, ಪ್ಲಾಸ್ಟಿಕ್ ಬಾಟಲಿ ಅಥವಾ ಅತಿಥಿಗಳ ಭಾಷಣಗಳಿಲ್ಲದೆ ಕಾಲೇಜಿನ ಬನಸಿರಿಯ ಮರದ ನೆರಳಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ʼಸರ್ ಸಿ. ವಿ ರಾಮನ್ ದಿನʼಆಚರಿಸಲಾಯಿತು. ಇನ್ನೋವೇಷನ್ ಕ್ಲಬ್ನ ಸಹನಿರ್ದೇಶಕ ಡಾ. ಸಿದ್ದರಾಜು ಎಂ. ಎನ್ ಹಾಗೂ ವಿದ್ಯಾರ್ಥಿನಿ ಸ್ಪೂರ್ತಿ ನೆಲದ ಮೇಲೆ ಹರಡಿದ್ದ ಎಲೆ, ಹಣ್ಣು, ಕಡ್ಡಿ ಮುಂತಾದುವುಗಳನ್ನು ಉಪಯೋಗಿಸಿಕೊಂಡು ʼರಾಮನ್ ಎಫೆಕ್ಟ್ʼ ಅಥವಾ ಬೆಳಕಿನ ಕಿರಣಗಳ ಚದುರುವಿಕೆಯನ್ನು ಸರಳವಾಗಿ ವಿವರಿಸಿದರು.

ತಮ್ಮ ಚಿಕ್ಕ ಪ್ರಯೋಗಾಲಯದಲ್ಲಿ ದ್ದ ಸಾಮಾನ್ಯ ಉಪಕರಣಗಳನ್ನೇ ಬಳಸಿಕೊಂಡು ಜಗತ್ತೇ ಬೆರಗಾಗುವಂತಹ “ರಾಮನ್ ಎಫೆಕ್ಟ್”ಎಂಬ ಅತ್ಯಮೂಲ್ಯ ಸಂಶೋಧನೆ ಮಾಡಿ ನೊಬೆಲ್ ಪಡೆದ ಮಹಾನ್ ವಿಜ್ಞಾನಿ ಸಿ ವಿ ರಾಮನ್ ರ ಪರಿಶ್ರಮ ಮತ್ತು ಮಹತ್ವವನ್ನು ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಗೌಸಿಯಾ ವೆಬಿನಾರ್ ಮೂಲಕ ವಿವರಿಸಿದರು. ನಂತರ ಭೌತಶಾಸ್ತ್ರ ವಿದ್ಯಾರ್ಥಿ ಅಬೂಬಕರ್ ಸಿದ್ದಿಕ್, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳ ಬಗ್ಗೆ ಮಾತನಾಡಿದರು. ಭಾರತೀಯ ವಿಜ್ಞಾನಿಗಳು ಮತ್ತು ಅವರ ಸಾಧನೆಗಳ ಬಗ್ಗೆ ಕಿರು ಪರಿಚಯ ನೀಡಿದ ಡಾ. ಸಿದ್ದರಾಜು, ಯುವಜನಾಂಗ ಮೊಬೈಲ್, ಟಿವಿಗಳಿಗೆ ಆಕರ್ಷಿತರಾಗಿರುವುದು ಸಹಜ. ಆದರೆ ನಮ್ಮಲ್ಲಿ ಖಗೋಳ ವಿಜ್ಞಾನದ ಬಗ್ಗೆ, ಭೂಮಂಡಲದ ವೈಪರೀತ್ಯದ ಬಗ್ಗೆ, ವೈರಸ್ ಹರಡುವ ಬಗ್ಗೆ, ವೈದ್ಯಕೀಯ ಮಹಾ ಸಂಶೋಧನೆಗಳ ಬಗ್ಗೆ, ವೈಜ್ಞಾನಿಕ ಚಿಂತನೆ ಬೆಳೆಸುವ ಹಾಗು ಬುದ್ಧಿಮತ್ತೆಗೆ ಸವಾಲೆಸೆಯುವ ಉತ್ತಮ ಸೈನ್ಸ್ ಫಿಕ್ಷನ್ಗಳಿವೆ. ಅವುಗಳನ್ನು ನೋಡಿ ವಿಜ್ಞಾನದ ಬೆಳವಣಿಗೆಯ ಬಗ್ಗೆ ಅರಿತುಕೊಳ್ಳಬಹುದು , ಎಂದರು.