Recent Posts

Monday, January 20, 2025
ಬೆಂಗಳೂರು

ತೆರೆ ಮೇಲೆ ಬರಲಿದೆ ಕಂಬಳ ಕುರಿತ ಸಿನಿಮಾ-ಕಹಳೆ ನ್ಯೂಸ್

ಬೆಂಗಳೂರು : ಉಡುಪಿ ಹಾಗೂ ದಕ್ಷಿಣಕನ್ನಡ ಭಾಗದಲ್ಲಿ ಹೆಚ್ಚು ಜನಪ್ರಿಯವಾದ ಕ್ರೀಡೆ ಕಂಬಳದ ಕುರಿತು ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಸರುಗದ್ದೆಯಲ್ಲಿ ಉಸೈನ್ ಬೋಲ್ಟ್‍ಗಿಂತಲೂ ವೇಗವಾಗಿ ಓಡಿ ದಾಖಲೆ ನಿರ್ಮಿಸಿ ಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರ ಕುರಿತು ಸಿನಿಮಾ ಮಾಡುವುದಾಗಿ ಕಳೆದ ವರ್ಷ ನಿರ್ಮಾಪಕ ನಿಖಿಲ್ ಮಂಜು ಹೇಳಿದ್ದರು, ಆದರೆ ಇದೀಗ ರಾಜೇಂದ್ರ ಸಿಂಗ್ ಬಾಬು ಕಂಬಳದ ವಿಷಯವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಜೇಂದ್ರ ಸಿಂಗ್ ಬಾಬು ಅವರು ಇತ್ತೀಚೆಗೆ ಮೂಡಿಬಿದರೆಯಲ್ಲಿ ನಡೆದ 500 ವರ್ಷಗಳ ಇತಿಹಾಸವಿರುವ ಕಂಬಳವು ಕನ್ನಡ ಸಿನಿಮಾದಲ್ಲಿ ಪ್ರಸ್ತಾಪವಾಗದ ವಿಷಯವಾಗಿ ಉಳಿದಿದ್ದು, ನಾನು ಈ ಸಿನಿಮಾಕ್ಕೆ ಸಂಬಂಧಿಸಿ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದೇನೆ ಎಂದಿದ್ದರು. ಇನ್ನು ಸ್ಕ್ರಿಪ್ಟ್ ಅಂತಿಮವಾದ ಮೇಲೆ ಪಾತ್ರವರ್ಗದ ಬಗ್ಗೆ ಯೋಚಿಸಲಿದ್ದು, ಈ ಸಿನಿಮಾವನ್ನು ಕನ್ನಡ ಹಾಗೂ ತುಳುವಿನಲ್ಲಿ ಮಾಡುವ ಯೋಚನೆ ಕೂಡ ಇದೆ ಎಂದು ಹೇಳಿದ್ಡಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು