Recent Posts

Monday, January 20, 2025
ಬೆಂಗಳೂರು

ಇದು ಕೇವಲ ಟ್ರೇಲರ್ ‘ಪಿಚ್ಚರ್ ಅಭಿ ಬಾಕಿ ಹೈ’ ; ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಕಾಂಗ್ರೆಸ್ ವ್ಯಂಗ್ಯ-ಕಹಳೆ ನ್ಯೂಸ್

ಬೆಂಗಳೂರು : ಸರ್ಕಾರವನ್ನೇ ಬುಡಮೇಲು ಮಾಡುವಷ್ಟು ತಾಕತ್ತಿದ್ದ, ಮೈತ್ರಿ ಸರ್ಕಾರದ ಕ್ಷಿಪ್ರ ಕ್ರಾಂತಿ ಸರದಾರ , ರಾಜ್ಯದ ಪ್ರಭಾವಿ ನಾಯಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಬಾಂಬ್ ಸ್ಫೋಟ ರಾಜ್ಯ ಸರ್ಕಾರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿಯ ಆಂತರಿಕ ಜಗಳದ ಫಲವಾಗಿ ಮೊದಲ ಒಂದು ಸಿಡಿ ಹೊರಬಿದ್ದಿದೆ. ‘ನೋಡಿದವರು’ ಮಾಡಿದವರನ್ನ ಬೆತ್ತಲಾಗಿಸಿದ್ದಾರೆ! ಇದು ಕೇವಲ ಟ್ರೇಲರ್ ‘ಪಿಚ್ಚರ್ ಅಭಿ ಬಾಕಿ ಹೈ’ ಎಂದು ಬಿಜೆಪಿ ಅಸಮಾಧಾನಿತರು, ಅತೃಪ್ತರು ಒಳಗೊಳಗೇ ಸಂತೃಪ್ತಿ ನಗು ಚೆಲ್ಲಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ಇನ್ನೊಂದೆಡೆ ಪೊಲೀಸ್ ಇಲಾಖೆ ಈ ಬಗ್ಗೆ ಈಗಾಗಲೇ ತನಿಖೆ ಕೈಗೆತ್ತಿಕೊಂಡಿದ್ದು, ಸಂತ್ರಸ್ಥೆಯ ಕುಟುಂಬಸ್ಥರು ಪೊಲೀಸರ ಬಳಿ ಪ್ರತಿಕ್ರಿಯೆ ನೀಡಿದ್ದು, ನಾವೇ ವಿಡಿಯೋ ನೀಡಿದ್ದು , ಜೀವ ಭಯವಿರುವ ಕಾರಣ ದೂರು ನೀಡಲು ಮುಂದೆ ಬಂದಿಲ್ಲ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸಂತ್ರಸ್ಥೆಯ ಕುಟುಂಬಸ್ಥರು ಪೊಲೀಸರ ಬಳಿ ಹೇಳಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು