Monday, January 20, 2025
ಹೆಚ್ಚಿನ ಸುದ್ದಿ

ಜನ್ಮ ಭೂಮಿ ಭಾರತಕ್ಕೆ ಮರಳಲು ನಿರ್ಧರಿಸಿದ ಶ್ರೀ ದಿವಾಕರ ಪೂಜಾರಿ –ಕಹಳೆ ನ್ಯೂಸ್

ಕರ್ಮಭೂಮಿ ಕತಾರ್ ದೇಶದಲ್ಲಿ ಮೂರುವರೆ ದಶಕಗಳ ನಿರಂತರ ಸೇವೆ ಸಲ್ಲಿಸಿದ ಸೇವಾ ಮಾಣಿಕ್ಯ, ಉಡುಪಿ ಸಮೀಪದ ಅಂಬಲ್ಪಾಡಿ ಗ್ರಾಮದ ಶ್ರೀ ದಿವಾಕರ ಪೂಜಾರಿಯವರು ತಮ್ಮ ಜನ್ಮ ಭೂಮಿ ಭಾರತಕ್ಕೆ ಮರಳಲು ನಿರ್ಧರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಐಸಿಸಿ, ಐಸಿಬಿಎಫ್, ಐಬಿಪಿಸಿ, ಐ ಎಸ್ ಸಿ ಉಪ ಸಮಿತಿ ಸದಸ್ಯರಾಗಿ, ತುಳು ಕೂಟದ ಅಧ್ಯಕ್ಷರಾಗಿ, ಬಿಲ್ಲಾವಾಸ್ ಕತಾರ್ ನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶುದ್ಧ ಮನಸ್ಸಿನ ಬುದ್ಧ, ಸದಾ ಸಮಾಜ ಸೇವೆಗೆ ಸಿದ್ದರಾಗಿ ತನ್ನನ್ನು ತೊಡಗಿಸಿಕೊಂಡು ಸದಾ ಹಸನ್ಮುಖಿಯಾಗಿ ಕಾಣಿಸಿಕೊಂಡ ಶ್ರಮಜೀವಿ. ಜಾತಿ, ಮತ, ಬೇಧವಿಲ್ಲದೆ ಅಪಧ್ಭಾಂಧವರಾಗಿ ಜನರ ಕಣ್ಣೀರೊರೆಸಿದ ಕಣ್ಮಣಿ. ಪ್ರಚಾರಪ್ರಿಯರಾಗದೆ, ವಿಚಾರಪ್ರಿಯರಾಗಿ ಬದುಕಿ, ಪರರಿಗೆ ದಾರಿದೀಪವನ್ನು ತೋರಿದವರು.

ಸರಳ ಸ್ವಭಾವದ ಸಜ್ಜನನಾಗಿ, ನಿಸ್ಪ್ರಹತೆಯಿಂದ ಸಮಾಜ ಸೇವೆ ಮಾಡುತ್ತಿರುವ ಒಬ್ಬ ಅಪೂರ್ವ ವ್ಯಕ್ತಿತ್ವ ಅವರದ್ದು. “ಆರ್ಯಭಟ” ಅಂತಹ ಪ್ರಶಸ್ತಿಯನ್ನು ಮುಡಿಗೇಸಿಕೊಂಡ ಸೇವಾಭಟ, ರಂಗಭೂಮಿಯಲ್ಲಿ ಶ್ರೇಷ್ಠ ನಟ ಎನ್ನುವುದು ದಿಟ. ದಿವಾಕರ ಅವರಿಗೆ ಭಾರತೀಯ ಸಂಸ್ಕøತಿ ಕೇಂದ್ರವು ಅಶೋಕ ಸಭಾಂಗಣದಲ್ಲಿ ಪ್ರಸ್ತುತ ಮತ್ತು ಹಿಂದಿನ ಕೆಲವು ಉನ್ನತ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರೊಂದಿಗೆ ವಿದಾಯ ಹೇಳಿದರು. ಕೋವಿಡ್ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಸಭೆ ನಡೆಸಲು ಯೋಜಿಸಲಾಗಿತ್ತು .

ನಾಯಕರು ತಮ್ಮ ನೆನಪುಗಳನ್ನು ಸಿಂಹಾವಲೋಕನ ಮಾಡುತ್ತಾ ತಮ್ಮ ಅನುಭವಗಳನ್ನು ದಿವಾಕರ್ ಪೂಜಾರಿ ಅವರೊಂದಿಗೆ ಹಂಚಿಕೊಂಡರು. ಜಿಯಾಡ್ ಉಸ್ಮಾನ್, ಅಜೀಮ್ ಅಬ್ಬಾಸ್, ಮಣಿಕಾಂತನ್, ನೀಲಂಗು ಡೇ, ಗಿರೀಶ್ ಕುಮಾರ್, ಮಿಲನ್ ಅರುಣ್, ವಿನೋದ್ ನಾಯರ್, ಸೀನು ಪಿಳ್ಳೈ ಅವರು ಭಾಗವಹಿಸಿದ್ದರು. ಐಸಿಸಿ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧ್ಯಕ್ಷತೆ ವಹಿಸಿ ಐಸಿಸಿ ಅಧ್ಯಕ್ಷ ಪಿ.ಎನ್.ಬಾಬು ರಾಜನ್ ಅವರ ಸಂದೇಶ ರವಾನಿಸಿದರು.

ಕಾರ್ಯಕ್ರಮವನ್ನು ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಮುಕ್ತಾಯಗೊಳಿಸಿದರು. ಭಾರತೀಯ ಸಮುದಾಯಕ್ಕೆ ದಿವಾಕರ ಅವರು ನೀಡಿದ ಅವಿರತ ಕೊಡುಗೆಗಾಗಿ ಐಸಿಸಿ ವ್ಯವಸ್ಥಾಪನಾ ಸಮಿತಿಯು ಮೆಚ್ಚಿಗೆಯ ಸ್ಮರಣಿಕೆ ನೀಡಿತು. ಉತ್ತರವಾಗಿ ದಿವಾಕರ ಪೂಜಾರಿಯವರು ತಮ್ಮ ಹೃದಯಸ್ಪರ್ಶಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.