Monday, January 20, 2025
ಹೆಚ್ಚಿನ ಸುದ್ದಿ

ಬಿಜೆಪಿ ಸಂಸದ ಕೌಶಲ್ ಕಿಶೋರ್ ಪುತ್ರ ನ ಮೇಲೆ ಗುಂಡಿನ ದಾಳಿ-ಕಹಳೆ ನ್ಯೂಸ್

ಲಕ್ನೋ : ಬಿಜೆಪಿ ಸಂಸದ ಕೌಶಲ್ ಕಿಶೋರ್ ಪುತ್ರ ನ ಮೇಲೆ ಬುಧವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಆತನ ಸಹೋದರ ಮಾವನೇ ಈ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಂಡಿನ ದಾಳಿಯ ಪರಿಣಾಮ ಆಯುಷ್‌ ಗಾಯಗೊಂಡಿದ್ದು, ರಾತ್ರಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ದಾಳಿಯನ್ನು ಆಯುಷ್‌ ಅವರ ಸೋದರ ಮಾವ ನಡೆಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ದಾಳಿಯ ಬಗ್ಗೆ ಯಾರೊಬ್ಬರೂ ದೂರು ದಾಖಲಿಸಿಲ್ಲ. ಆದರೆ ನಮಗೆ ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ ಸಿಕ್ಕಿದೆ ಎಂದು ಲಖನೌನ ಪೊಲೀಸ್ ಆಯುಕ್ತ ಡಿ.ಕೆ ಠಾಕೂರ್ ಅವರು ಮಾಹಿತಿ ನೀಡಿದರು. ಲಖನೌನ ಮಡಿಯಾನ್ ಪ್ರದೇಶದಲ್ಲಿ ಮೋಹನ್ ಲಾಲ್‍ಗಂಜ್ ಕ್ಷೇತ್ರದ ಬಿಜೆಪಿ ಸಂಸದನ ಮಗ ಆಯುಷ್‌ (30) ಮೇಲೆ ಸ್ವಂತ ಮಾವನೇ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಮುಂಜಾನೆ 2 ಗಂಟೆಯ ವೇಳೆ ದಾಳಿ ನಡೆಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು