Monday, January 20, 2025
ಸುಳ್ಯ

ಸಾವಿರಾರು ಬೀಡಿ ಕಾರ್ಮಿಕರಿಗೆ ಉದ್ಯೋಗವನ್ನು ನೀಡಿ ಬದುಕಿಗೆ ಆಸರೆಯಾಗಿದ್ದ ಸುಳ್ಯದ ಬೀಡಿ ಉದ್ಯಮಿ, ಲಯನ್ ಟಿ.ಪಿ.ಸುಲೈಮಾನ್ ನಿಧನ-ಕಹಳೆ ನ್ಯೂಸ್

ಸುಳ್ಯ : ಸಾವಿರಾರು ಬೀಡಿ ಕಾರ್ಮಿಕರಿಗೆ ಉದ್ಯೋಗವನ್ನು ನೀಡಿ ಬದುಕಿಗೆ ಆಸರೆಯಾಗಿದ್ದ ಸುಳ್ಯದ ಬೀಡಿ ಉದ್ಯಮಿ, 60ವರ್ಷದ ಲಯನ್ ಟಿ.ಪಿ.ಸುಲೈಮಾನ್ ಹೃದಯಾಘಾತದಿಂದ ಮಾರ್ಚ್ 3 ರಂದು ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಕ್ರೀಡಾ ಪ್ರೋತ್ಸಾಹಕ ರಾಗಿದ್ದು, ಬಾಲ್ಯದಿಂದಲೇ ವಾಲಿಬಾಲ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್ ಪಂದ್ಯಗಳ ಕ್ರೀಡಾಪಟುವಾಗಿದ್ದರು. ಸುಳ್ಯದಲ್ಲಿ ನಿರ್ಮಾಣಗೊಂಡಿರುವ ಟೆನ್ನಿಸ್ ಕ್ರೀಡಾಂಗಣದ ಸ್ಥಾಪಕರಲ್ಲಿ ಓರ್ವರಾಗಿದ್ದ ಇವರು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಅಭಿರುಚಿ ಸುಳ್ಯಕ್ಕೆ ತೋರಿಸಿಕೊಟ್ಟವರು ಇವರಾಗಿದ್ದರು. ಕೊಡುಗೈ ದಾನಿಯಾಗಿದ್ದ ಇವರು ಸುಮಾರು 4 ದಶಕಗಳ ಕಾಲ ಬೀಡಿ ಉದ್ಯಮವನ್ನು ನಡೆಸಿಕೊಂಡು ಬಂದವರು. 2009- 10 ನೇ ಸಾಲಿನ ಸುಳ್ಯ ಲಯನ್ಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು, ಬೀಡಿ ಕಾರ್ಮಿಕರ ಸ್ಕಾಲರ್ಶಿಪ್ ಶಿಬಿರಗಳನ್ನು ನಡೆಸಿ ಸದಾ ಕಾರ್ಮಿಕರ ಪರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಗ್ರೀನ್‍ವ್ಯೂ ಮೋಡೆಲ್ ಎಜ್ಯುಕೇಶನಲ್ ಟ್ರಸ್ಟ್‍ನ ಸ್ಥಾಪಕರಲ್ಲಿ ಓರ್ವರಾಗಿದ್ದರು. ವಾಲಿಬಾಲ್ ಅಸೋಸಿಯೇಶನ್‍ನಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಅಗಲುವಿಕೆ ಸಮಾಜದಲ್ಲಿ ತುಂಬಲಾರದ ನಷ್ಟವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು