Friday, November 22, 2024
ಹೆಚ್ಚಿನ ಸುದ್ದಿ

ನೆಲ್ಯಾಡಿಯ ಶಿರಾಡಿ ಗ್ರಾಮದ ಉದನೆಯಲ್ಲಿ ಆರೋಪಿಗಳ ಕಾರು ಮಾರಾಟ ವಂಚನೆ ಪ್ರಕರಣ; ಮತ್ತಿಬ್ಬರು ಪೊಲೀಸರ ಅಮಾನತು-ಕಹಳೆ ನ್ಯೂಸ್

ನೆಲ್ಯಾಡಿ : ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಈ ಹಿಂದೆ ಶಿರಾಡಿ ಗ್ರಾಮದ ಉದನೆಯಲ್ಲಿದ್ದ ಸಂಸ್ಥೆಯೊಂದರ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಸೇರಿದ್ದ ಐಷಾರಾಮಿ ಕಾರು ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದ ಮತ್ತಿಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಎಂದು ಆದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರು ಮಾರಾಟ ಪ್ರಕರಣದ ಸಂದರ್ಭದಲ್ಲಿ ಸಿಸಿಬಿ ತಂಡದಲ್ಲಿದ್ದ ರಾಜ ಮತ್ತು ಆಶಿತ್ ಡಿ.ಸೋಜ ಅಮಾನತುಗೊಂಡವರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಳ್ರಾಜ್ ಮತ್ತು ಪಾಂಡೇಶ್ವರ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಎಂಬವರನ್ನು ಫೆಬ್ರವರಿ 27ರಂದು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ನೀಡಿದ್ದರು. ಈ ಮೂಲಕ ಈ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸರ ಸಂಖ್ಯೆ 4 ಕ್ಕೆ ಏರಿಕೆಯಾಗಿದ್ದು, ಉದನೆಯಲ್ಲಿ ಕೇರಳ ಮೂಲದ ಮೂವರು ಕಾರ್ಪೊರೇಟ್ ಸಂಸ್ಥೆ’ ಆರಂಭಿಸಿ ಹಣ ದ್ವಿಗುಣಗೊಳಿಸುವ ಭರವಸೆ ನೀಡಿ ಸಾವಿರಾರು ಮಂದಿಯಿಂದ 30 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು