Tuesday, January 21, 2025
ಹೆಚ್ಚಿನ ಸುದ್ದಿ

ವೀರ ಸಾವರ್ಕರ್ ಪುಣ್ಯತಿಥಿಯ ಪೋಸ್ಟ್ ಹಾಕಿದ ಕರ್ನಾಟಕ ಮುಖ್ಯಮಂತ್ರಿ ; ದೇಶದ್ರೋಹಿ ಎಂದು ಕಮೆಂಟ್ ಅನ್ನು ಹಾಕಿದ ಉಪನ್ಯಾಸಕ ವಿಶಾಕ್ ಜಿ ಶೆಟ್ಟಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಉಡುಪಿ ಅಪರ ಜಿಲ್ಲಾಧಿಕಾರಿಗಳಿಗೆ ABVP ಉಡುಪಿ ನಗರ ವತಿಯಿಂದ ಮನವಿ-ಕಹಳೆ ನ್ಯೂಸ್

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸ್ವಾತಂತ್ರ ಹೋರಾಟಗಾರರಾದ ವೀರ ಸಾವರ್ಕರ್ ಅವರ ಪುಣ್ಯತಿಥಿಯ ಪೋಸ್ಟ್ ಫೇಸ್‍ಬುಕ್‍ನಲ್ಲಿ ಹಾಕಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಒಂದು ಪೋಸ್ಟ್ ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಉಪನ್ಯಾಸಕರಾದ ವಿಶಾಕ್ ಜಿ ಶೆಟ್ಟಿ ಅವರು ದೇಶದ್ರೋಹಿ ಎಂದು ಕಮೆಂಟ್ ಅನ್ನು ಮಾಡಿರುತ್ತಾರೆ. ಕಮೆಂಟ್ ಮಾಡುವುದು ಅವರವರ ವ್ಯಕ್ತಿಗತ ಸ್ವಾತಂತ್ರ್ಯ ಆದರೆ, ಒಂದು ಸರ್ಕಾರಿ ಅನುದಾನಿತ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಕಮೆಂಟ್ ಮಾಡುವುದು ಎಷ್ಟು ಸರಿ. ಅಲ್ಲದೇ ಜಗತ್ತಿನ ಕೋಟ್ಯಾಂತರ ಜನ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾರ್ವರ್‍ಕರ್ ಅವರನ್ನು ಗೌರವಿಸುತ್ತಿರುವಾಗ, ಇವರು ದೇಶ ದ್ರೋಹಿ ಎಂದು ಯಾವ ಹಿನ್ನಲೆಯಲ್ಲಿ ಹೇಳಿದ್ದಾರೆ. ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಯಾವ ರೀತಿಯಾಗಿ ತರಗತಿಗಳಲ್ಲಿ ಪಾಠ-ಪ್ರವಚನಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ತಾವುಗಳು ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆವೆ. ಎಂದು ಉಡುಪಿ ಅಪರ ಜಿಲ್ಲಾಧಿಕಾರಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಸವೇಶ ಕೋರಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ, ಆಶೀಶ್ ಶೆಟ್ಟಿ ಬೋಳ ಉಡುಪಿ ಜಿಲ್ಲಾ ಸಹ ಸಂಚಾಲಕರು, ಶ್ರೀಹರಿ ಭಟ್ ಉಡುಪಿ ತಾಲೂಕು ಸಂಚಾಲಕರು, ಸುಮುಖ ನಗರ ಸಹ ಕಾರ್ಯದರ್ಶಿ, ಪ್ರಮುಖ ಕಾರ್ಯಕರ್ತರಾದ ಸನಕ, ಸಾರ್ಥಕ್ ಶೆಟ್ಟಿ, ರಿಕಿತ್, ಅಪೂರ್ವ, ಉಪಸ್ಥಿತರಿದ್ದರು.