Sunday, November 24, 2024
ಕಡಬ

ಕುಕ್ಕೆ ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೊಟ್ಯಾಂತರ ರೂ. ಮರ ಕಳವು ಪ್ರಕರಣ ಮನೆಗೆ ನುಗ್ಗಿ ದಾಂದಲೇ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ದ ನೀತಿ ತಂಡ ಹೋರಾಟಕ್ಕೆ ಸಿದ್ದತೆ-ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತಿ ದೂರು ದಾಖಲಿಸಲು ಸಿದ್ದತೆ..!?-ಕಹಳೆ ನ್ಯೂಸ್

ಕಡಬ : ಸುಬ್ರಹ್ಮಣ್ಯ ವಲಯ ರಕ್ಷಿತಾ ಅರಣ್ಯದಲ್ಲಿ ಕೊಟ್ಯಾಂತರ ಬೆಲೆ ಬಾಳುವ ಮರ ಕಳ್ಳತನ ಆಗಿದ್ದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲು, ದೂರು ನೀಡಿದಾತನ ಮೇಲೆ ಸೇಡು ತೀರಿಸುವ ಪ್ರಯತ್ನ ನಡೆಸುತ್ತಿರುವ ಸಂಚಾರಿ ದಳದ ವಲಯಾ ಅರಣ್ಯ ಅಧಿಕಾರಿ ಸಂಧ್ಯಾ ಹಾಗೂ ಅರಣ್ಯಾಧಿಗಳ ವಿರುದ್ದ ಹೋರಾಟ ನಡೆಸಲು ಸಾಮಾಜಿಕ ಕಾರ್ಯಕರ್ತ, ನೀತಿ ತಂಡ ರಾಜ್ಯಾಧ್ಯಕ್ಷ ಜಯನ್ ಸಿದ್ದತೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂದಲೆ ಎಬ್ಬಿಸಿರುವ ಅರಣ್ಯ ಇಲಾಖೆಯವರ ವಿರುದ್ದ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಹಿತಿ ನೀಡಿರುವ ಜಯನ್ ಅವರು ಕೊಟ್ಯಾಂತರ ಮರ ಕಳ್ಳತನ ಆಗಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಳಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ, ಮರಕಳ್ಳತನದಲ್ಲಿ ಶಾಮೀಳಾಗಿದ್ದಾರೆ ಎಂದು ಆರೋಪಿಸಲಾದ ಅಧಿಕಾರಿಗಳ ಸ್ತರದ ಇನ್ನೊರ್ವ ಅಧಿಕಾರಿ ತನಿಖೆ ನಡೆಸುವುದು ಅಂದರೆ ಏನರ್ಥ, ಆ ಅಧಿಕಾರಿ ಕೂಡ ರಾತ್ರೋ ರಾತ್ರಿ ಗೂಂಡಗಳ ರೀತಿಯಲ್ಲಿ ವರ್ತಿಸಿ ಮಹಿಳೆಯರು, ಮಕ್ಕಳಿಗೆ ಹಲ್ಲೆ ನಡೆಸುತ್ತಿದ್ದಾರೆ ಎಂದರೆ ಇದನ್ನು ಕೇಳುವವರು ಯಾರು ಇಲ್ಲವೇ, ಕೂಡಲೇ ನ್ಯಾಯಾಲಯ ಮಧ್ಯಪ್ರವೇಶಿಸಿ ಸುಬ್ರಹ್ಮಣ್ಯ ವಲಯ ಅರಣ್ಯದಲ್ಲಿ ಬೇರೆ ಬೇರೆ ವಿಭಾಗದಲ್ಲಿ ನಡೆದಿರುವ ಭ್ರಷ್ಟಚಾರವನ್ನು ತನಿಖೆ ನಡೆಸಿ ಶಾಮೀಳಾಗಿರುವ ಅಧಿಕಾರಿಗಳ ವಿರುದ್ದ ತನಿಖೆ ನಡೆಸಬೇಕು ಅಲ್ಲಿಯವರೆಗೆ ಹೋರಾಟ ಮುಂದುವರಿಲಿದೆ ಎಂದು ಅವರು ತಿಳಿಸಿದ್ದಾರೆ.