Tuesday, January 21, 2025
ಪುತ್ತೂರು

ಎಸ್ ಡಿಪಿಐ ಪುಂಡರ ಅಟ್ಟಹಾಸಕ್ಕೆ ಶಾಸಕ ಸಂಜೀವ ಮಠಂದೂರು ಕಿಡಿ..! ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದವರ ಮೇಲೆ ಕಠಿಣ ಕ್ರಮ-ಕಹಳೆ ನ್ಯೂಸ್

ಪುತ್ತೂರು : ಮುಸ್ಲಿಂ ಯುವಕರ ತಂಡ ರಾಮ ಮಂದಿರ ನಿರ್ಮಾಣದ ಸ್ಟೇಟಸ್ ವಾಟ್ಸ್‍ಪ್ ನಲ್ಲಿ ಹಾಕಿದ್ದಾನೆ ಎಂಬ ಕಾರಣಕ್ಕೆ ಹಿಂದೂ ಯುವಕ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಸಂಜೀವ ಮಠಂದೂರು ನಿನ್ನೆ ಗಾಯಾಳು ಯುವಕ ಚಿಕಿತ್ಸೆ ಪಡೀತಾ ಇರೋ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಅದರ್ಶನಗರದಲ್ಲಿ ಮುಕುಂದ್ ಎಂಬುವವರು ತನ್ನ ಮೊಬೈಲ್ ನಲ್ಲಿ ರಾಮ ಮಂದಿರದ ಸ್ಟೇಟಸ್ ಹಾಕಿದ್ರು, ಇದನ್ನು ಪ್ರಶ್ನಿಸಿದ ಯುವಕರ ತಂಡ ಮನೆಗೆ ನುಗ್ಗಿ ಹಲ್ಲೆಗೆ ಮುಂದಾಗಿದ್ದಾರೆ. ಮಹಿಳೆಯನ್ನು ಲೆಕ್ಕಿಸದೇ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇನ್ನು ಎಸ್ ಡಿ ಪಿಐ ಪುಂಡರ ಅಟ್ಟಹಾಸವನ್ನ ಖಂಡಿಸಿದ ಶಾಸಕರು, ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದು, ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು