Sunday, January 19, 2025
ಸುದ್ದಿ

ಕೈರಂಗಳ ಅಮೃಧಾರಾ ಗೋಶಾಲೆಗೆ ಪೇಜಾವರ ಶ್ರೀ ; ಕೊನೆಗೂ ಶ್ರೀಗಳ ಆಣತಿಯಂತೆ ಉಪವಾಸ ಕೈಬಿಟ್ಟ ರಾಜಾರಾಮ್ ಭಟ್ – ಕಹಳೆ ನ್ಯೂಸ್

ಕೈರಂಗಳ : ಅಪರಾದಿಗಳು ಸ್ಪಷ್ಟವಾಗಿ ಗೊತ್ತಿದ್ದರೂ ಸಹ ಸರಕಾರ ನಿಷ್ಕ್ರಿಯವಾಗಿರುವುದು ದುರಂತ, ರಾಜರಾಂ ಭಟ್ ಅವರ ನಿರಶನವು ಎಲ್ಲರಿಗೂ ಸ್ಪೂರ್ತಿ ತಂದಿದೆ. ಈ ಹೋರಾಟ ನಿರಂತರ ನಡೆಯಬೇಕು.ಗೋವುಗಳ ರಕ್ಷಣೆ ನಡೆಯಬೇಕು ಎಂದು ಪೇಜಾವರ ಶ್ರೀ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಅಮೃತಧಾರಾ ಗೋ ಶಾಲೆಗೆ ಭೇಟಿ ನೀಡಿ ರಾಜಾರಾಮ್ ಭಟ್ ಅವರ ಮನ ವೊಲಿಸಿ ಮುಂದಿನ ಹೋರಾಟಕ್ಕೆ ಸ್ಫೂರ್ತಿ ನೀಡಿ ಗೋವುಗಳ ರಕ್ಷಣೆ ನೀಡಬೇಕು. ಆದರೂ ಗೋವುಗಳ ಹಗಲು ದರೋಡೆಯೇ ನಡೆಯುತ್ತಿದೆ. ಸರಕಾರದೊಂದಿಗೆ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿದ್ಧಾರೆ, ಗೋಹತ್ಯೆ ನಿಲ್ಲಿಸಲು ಹಿಂಸಾತ್ಮಕ ಉಪವಾಸವೂ ಬೇಡ ವಿಭಿನ್ನ ರೀತಿಯ ಪ್ರತಿಭಟನೆ ಮುಂದಿನ ದಿವಸಗಳಲ್ಲಿ ಕೈಗೊಳ್ಳೋಣ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಅಮೃತಧಾರ ಗೋಶಾಲೆಯಲ್ಲಿ ಉಪವಾಸ ನಿರತ ರಾಜಾರಾಂ ಭಟ್ ಅವರು ಪೇಜಾವರ ಶ್ರೀಗಳಿಂದ ಹಾಲು ಸ್ವೀಕರಿಸಿ ನಿರಶನ ಕೈಬಿಟ್ಟರು.