Monday, January 20, 2025
ಸುದ್ದಿ

ಪಣಂಬೂರಿನಲ್ಲಿ ಲಾರಿ ಒಳಗೆ ನುಗ್ಗಿ ಚಾಲಕನಿಗೆ ಹಲ್ಲೆಗೈದ ಟ್ರಾಫಿಕ್ ಪೊಲೀಸ್; ಲಾರಿ ಯೂಟರ್ನ್ ತೆಗ್ದಿದ್ದೇ ತಪ್ಪಾಯ್ತ..?-ಕಹಳೆ ನ್ಯೂಸ್

ಮಂಗಳೂರು : ಪಣಂಬೂರು ಸಮೀಪ ಟ್ರಾಫಿಕ್ ಪೊಲೀಸರೊಬ್ಬರು ಲಾರಿ ಚಾಲಕನಿಗೆ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಣಂಬೂರು ಜಂಕ್ಷನ್ ನಲ್ಲಿ ಲಾರಿ ಚಾಲಕ ಯೂಟರ್ನ್ ಮಾಡುವ ವೇಳೆ ಬ್ಲಾಕ್ ಆದದ್ದನ್ನೇ ಪ್ರಶ್ನಿಸಿ ಲಾರಿ ಒಳಗೆ ನುಗ್ಗಿ ಚಾಲಕನ ಬಟ್ಟೆ ಹರಿದು ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಚಾಲಕನ ತಪ್ಪಿಲ್ಲದಿದ್ದರೂ ಟ್ರಾಫಿಕ್ ನ್ನು ನಿಯಂತ್ರಣಕ್ಕೆ ತರುವುದು ಬಿಟ್ಟು ಏಕಾ ಏಕಿ ಮೈಮೇಲೆ ಎರಗಿ ಥಳಿಸಿರುವುದನ್ನು ಲಾರಿ ಚಾಲಕ-ಮಾಲಕರು ಖಂಡಿಸಿದ್ದಾರೆ. ಟ್ರಾಫಿಕ್ ಸಿಬ್ಬಂದಿ ಈ ರೀತಿ ದುರ್ವರ್ತನೆ ತೋರಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು