Saturday, November 23, 2024
ಪುತ್ತೂರು

ಅಂಬಿಕಾದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು : ಅತಿ ಅಲ್ಪ ಸಮಯದಲ್ಲೇ ಅತೀ ಶೀಘ್ರವಾಗಿ ಪ್ರವರ್ಧಮಾನಕ್ಕೇರುತ್ತಿರುವ ಅಂಬಿಕಾ ವಿದ್ಯಾ ಸಂಸ್ಥೆ ಪುತ್ತೂರಿನಲ್ಲಿ ಖ್ಯಾತಿ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತ ಮಂಡಳಿ ಹಾಗೂ ಪೋಷಕರು ಸಂಸ್ಥೆಯ ಆಧಾರ ಸ್ತಂಭ. ಪದವಿ ಪೂರ್ವ ವಿದ್ಯಾಭ್ಯಾಸ ಭವಿಷ್ಯಕ್ಕೆ ಅಡಿಪಾಯ ಹಾಕುವ ಹಂತ. ಖಂಡಿತಾ ಈ ವಯಸ್ಸಿನಲ್ಲಿ ದಾರಿ ತಪ್ಪದೆ ಉತ್ತಮ ಗುರಿಗಾಗಿ ಸಾಧನೆ ಗೈಯುತ್ತಾ ಮುನ್ನಡೆಯಿರಿ. ಗುರು ಹಿರಿಯರಿಯರಿಗೆ ಗೌರವ ಕೊಡುತ್ತಾ ಉತ್ತಮ ಪ್ರಜೆಗಳಾಗಿ ಇತರರು ನಿಮ್ಮನ್ನು ನೋಡಿ ಖುಷಿ ಪಡುವಂತಾಗಲಿ ; ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ , ಪುತ್ತೂರಿನ ಸರಕಾರಿ ವೈದ್ಯೆ ಖ್ಯಾತ ನೇತ್ರ ತಜ್ಞೆ ಡಾ. ಆಶಾಪುತ್ತೂರಾಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಟ್ಟೋಜ ಪೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಂಚಾಲಕರಾದ ಸುಬ್ರಮಣ್ಯ ನಟ್ಟೋಜರು ಅಂಬಿಕಾದಲ್ಲಿ ಇದುವರೆಗೆ ಆಯ್ಕೆಯಾದ ವಿದ್ಯಾರ್ಥಿ ನಾಯಕರ ಸಾಧನೆಯನ್ನು ಸ್ಮರಿಸಿದರು. ಸ್ವಚ್ಛತಾ ಆಂದೋಲನ, ಉತ್ತಮ ಪರಿಸರ ನಿರ್ಮಾಣ, ಸಸಿಗಳ ವಿತರಣೆ, ಪಟಾಕಿ ರಹಿತ ದೀಪಾವಳಿ ಆಚರಣೆ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಹಾಯ ಹಸ್ತ , ಕಸಬ್‍ನಂತಹ ದೇಶ ದ್ರೋಹಿಯನ್ನು ಗಲ್ಲಿಗೇರಿಸಿದ ಪೇದೆಗಳಿಗೆ ಸನ್ಮಾನ ರೂಪವಾಗಿ ನೀಡಿದ ದೇಣಿಗೆ ಈ ಎಲ್ಲಾ ಸಾಧನೆಗಳನ್ನು ಶ್ಲಾಘಿಸಿ ಹಿರಿಯ ವಿದ್ಯಾರ್ಥಿ ನಾಯಕರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಮುನ್ನಡೆದು ಲಂಚರಹಿತ, ಭ್ರಷ್ಟಾಚಾರರಹಿತ ಸಮಾಜ ನಿರ್ಮಿಸಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲೆ ರಾಜಶ್ರೀ ಎಸ್ ನಟ್ಟೋಜ ಅವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಕಟ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿಧಿ ಇವರು ಅಧಿಕಾರವನ್ನು ನೂತನ ವಿದ್ಯಾರ್ಥಿ ನಾಯಕ ಅನ್ಮಯ ಭಟ್ ಹಾಗೂ ಕಾರ್ಯದರ್ಶಿ ಆಕಾಶ್ ಕೆ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಸುರೇಶ ಶೆಟ್ಟಿ ಇವರು ಮುಖ್ಯ ಅಥಿತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ತಮ್ಮನ್ನು ಆಯ್ಕೆ ಮಾಡಿದ ಸಹಪಾಠಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಅಭಿಜ್ಞಾ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.