Recent Posts

Friday, November 22, 2024
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿಗೆ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವತಿಯಿಂದ ಮಾರ್ಚ್1 ಮತ್ತು2 ರಂದು ಬೆಂಗಳೂರು ಸಿಟಿ ಯುನಿರ್ವಸಿಟಿ (ಸೆಂಟ್ರಲ್‍ಕಾಲೇಜು, ಬೆಂಗಳೂರು) ಆಯೋಜಿಸಿದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಗಳನ್ನೊಳಗೊಂಡ ಸಹನಾ ಪಿ ಜಿ ಮತ್ತು ಶರಣ್ಯ ಇವರ ತಂಡವು ಪ್ರದರ್ಶಿಸಿದ ‘ಆಹಾರ, ಆರೋಗ್ಯ ಮತ್ತು ನೈರ್ಮಲ್ಯ’ ಶಿರ್ಷಿಕೆಯ ವಿಜ್ಞಾನ ಮಾದರಿಯು ನಗದು ಮೂರು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕದೊಂದಿಗೆ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಆರು ವಲಯಗಳಿಂದ 30 ತಂಡಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿಯ ಕಾರ್ತಿಕ್ ಮತ್ತು ದೀಪಾಶ್ರೀ ಇವರನ್ನೊಳಗೊಂಡ ತಂಡವು ಭಾಗವಹಿಸಿ, ಉತ್ತಮ ಪ್ರದರ್ಶನವನ್ನು ನೀಡಿತ್ತು. ವಿಜ್ಞಾನ ವೇದಿಕೆಯ ನಿರ್ದೇಶಕರಾದ ಎಡ್ವಿನ್ ಡಿ’ಸೋಜ ಇವರು ತಂಡವನ್ನು ಮುನ್ನಡೆಸಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮತ್ತು ವಿಜ್ಞಾನ ವಿಭಾಗ ದಡೀನ್ ಪ್ರೊ. ಉದಯ ಕೆ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು