Recent Posts

Friday, November 22, 2024
ಮೈಸೂರು

ರಾಸಲೀಲೆ ಸಿಡಿ 5 ಕೋಟಿಗೆ ಡೀಲ್, ಬ್ಲ್ಯಾಕ್‍ಮೇಲ್ ಮಾಡುವವರನ್ನು ಒದ್ದು ಜೈಲಿಗೆ ಹಾಕಿ; ಹೆಚ್.ಡಿ.ಕುಮಾರಸ್ವಾಮಿ-ಕಹಳೆ ನ್ಯೂಸ್

ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೋಟಿ.ರೂ. ಡೀಲ್ ನಡೆದಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಈ ಡೀಲ್ ವ್ಯವಹಾರವು ಕಳೆದ ಮೂರು ತಿಂಗಳಿನಿಂದ ನಡೆದಿದ್ದು, ಇದರಲ್ಲಿ ದೊಡ್ಡವರ ಕೈವಾಡವಿದೆ. ಈ ವಿಚಾರದ ಬಗ್ಗೆ ಸೂಕ್ತವಾದ ತನಿಖೆ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರದ ಪತನಕ್ಕೆ ಕಾರಣರಾದವರು ಎಂದು ನಾನು ದ್ವೇಷ ಸಾಧಿಸಲು ಹೋಗುವುದಿಲ್ಲ ಎಂದಿದ್ದಾರೆ. ರಾಜಕಾರಣಿಗಳ ಸಿಡಿ ಇದೆ ಎಂದು ಹೇಳಿ ಬ್ಯ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಮಾಜಿ ಸಿಎಂ ಓರ್ವರು ಎಲ್ಲೋ ಹೋಗಿ ಬರುತ್ತಾರೆ. ನನ್ನ ಬಳಿ ಅದರ ಸಿಡಿ ಇದೆ ಎನ್ನುತ್ತಾನೆ. ಆ ಮಾಜಿ ಸಿಎಂ ಯಾರು ಎಂದು ತನಿಖೆಯ ಮೂಲಕ ಬಾಯಿ ಬಿಡಿಸಿ. ಇದರಿಂದ ನಗೆ ಮುಜುಗರವಾಗುವುದು ಬೇಡ ಎಂದು ಆಗ್ರಹಿಸಿದ್ದಾರೆ. ರಾಜಕಾರಣಿಗಳ ಸಿಡಿ ಇದೆ ಎಂದು ಬ್ಲ್ಯಾಕ್‍ಮೇಲ್ ಮಾಡುತ್ತಿರುವವರನ್ನು ಜೈಲಿಗೆ ತಳ್ಳಬೇಕು. ಅವರ ಬಳಿ ಇರುವ ಸಿಡಿಗಳನ್ನು ಜನತೆ ಎದುರು ಸರ್ಕಾರವೇ ಬಿಡುಗಡೆ ಮಾಡಲಿ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಕೂಡಾ ಯಾವುದೇ ಆಂಕರ್‌ನ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೆಸರು ಕೇಳಿ ಬಂದಿತ್ತು. ಆ ಸಂದರ್ಭ ನಾನು ಸರಿಯಾದ ಪ್ರತ್ಯುತ್ತರ ನೀಡಿದ್ದೇನೆ. ಈ ವಿಚಾರದಲ್ಲೂ ಕೂಡಾ ನನಗೆ ಭಯವಿಲ್ಲ. ಈ ರೀತಿಯಾದ ಬ್ಲ್ಯಾಕ್ ಮೇಲ್‍ಗಳು ನಿಲ್ಲಬೇಕು ಎನ್ನುವುದು ಮಾತ್ರವೇ ನನ್ನ ಉದ್ದೇಶ. ಈ ರೀತಿಯಾದ ಪ್ರಕರಣಗಳು ಅಸಹ್ಯ ಸ್ಥಿತಿ ನಿರ್ಮಾಣ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು