ಆಮಂತ್ರಣ ಪತ್ರಿಕೆ ಬಿಡುಗಡೆ | ಏಪ್ರಿಲ್ 22, 23ರಂದು ಚನ್ನಿಕುಡೇಲು ತರವಾಡಿನಲ್ಲಿ ಧರ್ಮದೈವ ಶ್ರೀ ಮಲರಾಯಿ ಮತ್ತು ಪರಿವಾರ ದೈವಗಳ ಧರ್ಮ ನೇಮೋತ್ಸವ-ಕಹಳೆ ನ್ಯೂಸ್
ಮಂಜೇಶ್ವರ : ಶ್ರೀ ನಾಗಬ್ರಹ್ಮ, ಮಲರಾಯಿ ಮತ್ತು ಪರಿವಾರ ದೈವಗಳ ಮೂಲಸ್ಥಾನ ಚನ್ನಿಕುಡೇಲು ತರವಾಡಿನಲ್ಲಿ (ಕುಲಾಲ ಉಪ್ಯಾನ್ ಕುಟುಂಬಸ್ಥರ ಮೂಲಸ್ಥಾನ) ಏಪ್ರಿಲ್ 22 ಗುರುವಾರ ಹಾಗೂ ಏಪ್ರಿಲ್ 23 ಶುಕ್ರವಾರ ನಡೆಯಲಿರುವ ಧರ್ಮದೈವ ಶ್ರೀ ಮಲರಾಯಿ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆದಿತ್ಯವಾರ ನಡೆಯಿತು.
ಏಪ್ರಿಲ್ 22 ಗುರುವಾರ ಬೆಳಗ್ಗೆ 8.30ಕ್ಕೆ ನಾಗ ತಂಬಿಲ, ಬ್ರಹ್ಮಗುರು ತಂಬಿಲ, 7ಕ್ಕೆ ಧರ್ಮದೈವ ಶ್ರೀ ಮಲರಾಯಿಯ ಭಂಡಾರ ಇಳಿಯುವುದು, 7.30ಕ್ಕೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, 10ಕ್ಕೆ ಧರ್ಮದೈವ ಶ್ರೀ ಮಲರಾಯಿ ಮತ್ತು ಬಂಟ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, 2.30ಕ್ಕೆ ಶ್ರೀ ಚಂಗುಕೊರತ್ತಿ ದೈವದ ಭಂಡಾರ ಇಳಿಯುವುದು, 3.30ಕ್ಕೆ ಶ್ರೀ ಚಂಗುಕೊರತ್ತಿ ದೈವದ ನೇಮ ನಡೆಯಲಿದೆ. ಸಾಯಂಕಾಲ 5 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ರವರ ಆಗಮನ, 6ಕ್ಕೆ ಪರಿವಾರ ದೈವಗಳ ಭಂಡಾರ ಇಳಿಯುವುದು, ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆ, 9.30ಕ್ಕೆ ಪರಿವಾರ ದೈವಗಳಾದ ಶ್ರೀ ಕುಪ್ಪೆಪಂಜುರ್ಲಿ, ಮಲಾರ್ದ ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ವರ್ಣರ ಪಂಜುರ್ಲಿ, ಶ್ರೀ ಮುಕಾಂಬಿ ಗುಳಿಗ ಮತ್ತು ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ. ಏಪ್ರಿಲ್ 23 ಶುಕ್ರವಾರ 6ಕ್ಕೆ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದ ವಿತರಣೆ, ಅಪರಾಹ್ನ 3.30ಕ್ಕೆ ಸ್ಥಳ ಗುಳಿಗ ದೈವದ ಭಂಡಾರ ಇಳಿಯುವುದು, ಸಾಯಂಕಾಲ 4.30ಕ್ಕೆ ಸ್ಥಳ ಗುಳಿಗ ದೈವದ ಕೋಲ, ರಾತ್ರಿ 8ಕ್ಕೆ ರಾಹುಗುಳಿಗ ದೈವದ ತಂಬಿಲ, ಗುರು ಹಿರಿಯರಿಗೆ ಬಡಿಸುವುದು ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.