Sunday, January 19, 2025
ಹೆಚ್ಚಿನ ಸುದ್ದಿ

ಕಾಂಗ್ರೆಸಿಗರು ಅಧಿಕಾರದಲ್ಲಿ ಇದ್ದಾಗ ಬ್ಲ್ಯಾಕ್‍ಮನಿ ಮಾಡುತ್ತಿದ್ದರು, ಅಧಿಕಾರ ಕಳೆದುಕೊಂಡ ಮೇಲೆ ಬ್ಲ್ಯಾಕ್‍ಮೇಲ್‍ಗೆ ಇಳಿದಿದ್ದಾರೆ; ನಳಿನ್ ಕುಮಾರ್ ಕಟೀಲ್-ಕಹಳೆ ನ್ಯೂಸ್

ಬೀದರ್ : ಜಿಲ್ಲೆಯ ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು, ‘ಕಾಂಗ್ರೆಸಿಗರು ಅಧಿಕಾರದಲ್ಲಿ ಇದ್ದಾಗ ಬ್ಲ್ಯಾಕ್‍ಮನಿ ಮಾಡುತ್ತಿದ್ದರು, ಅಧಿಕಾರ ಕಳೆದುಕೊಂಡ ಮೇಲೆ ಬ್ಲ್ಯಾಕ್‍ಮೇಲ್‍ಗೆ ಇಳಿದಿದ್ದಾರೆ’ ಎಂದು ಟೀಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಬೂತ್‍ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕಟೀಲು, ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮನಸ್ತಾಪಗಳು ಅತಿಯಾಗಿದೆ ಹೀಗಾಗಿ ಇನ್ನು ‘ಕಾಂಗ್ರೆಸ್‍ಗೆ’ ಉಳಿಗಾಲವಿಂದ ಕಾಂಗ್ರೆಸ್ಸಿಗರು ಬಿಜೆಪಿಗೆ ಬರುತ್ತಿದ್ದಾರೆ. ಯಾವಾಗಲೂ ಬಡವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದವರು ಬಡವರ ಅಕೌಂಟ್‍ಗೆ ದುಡ್ಡು ಹಾಕಲಿಲ್ಲ ಅದರ ಬದಲು ತಮ್ಮ ಅಕೌಂಟ್ ವಿಸ್ತರಿಸಿದರು ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ ನಳಿನ್, ‘ಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವೇಕೆ ಎನ್ನುವ ಮಾಜಿ ಸಿಎಂಗೆ ಮಾಜಿ ಸಿಎಂಗೆ ರಾಮನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ನೀವು ಮುಖ್ಯಮಂತ್ರಿ ಆಗುವ ಉದ್ದೇಶದಿಂದಲೇ ಒಂದು ಪಕ್ಷ ಇನ್ನೊಂದು ಪಕ್ಷಕ್ಕೆ ಹಾರಿದ್ರಿ’ ಎಂದು ವ್ಯಂಗ್ಯವಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು