Recent Posts

Monday, April 14, 2025
ಹೆಚ್ಚಿನ ಸುದ್ದಿ

ದನದ ಕೊಟ್ಟಿಗೆಯಲ್ಲಿ ಬೆಂಕಿ; ದನಗಳನ್ನು ರಕ್ಷಿಸಲು ಮುಂದಾದ ಯುವಕ ಅಗ್ನಿಗಾಹುತಿ-ಕಹಳೆ ನ್ಯೂಸ್

ತ್ಯಾಮಗೊಂಡ್ಲು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆಯಲ್ಲಿ ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ರಕ್ಷಿಸಲು ಮುಂದಾದ ಯುವಕ ಅಗ್ನಿಗಾಹುತಿಯಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಯುವಕನನ್ನು 24 ವರ್ಷದ ಲೋಕೇಶ್ ಎಂದು ಗುರುತಿಸಲಾಗಿದೆ. ಈ ಗ್ರಾಮದ ಶ್ರೀನಿವಾಸ್ ಎಂಬವರ ಮನೆಯಲ್ಲಿ ಶನಿವಾರ ರಾತ್ರಿ ದನದ ಕೊಟ್ಟಿಗೆಯ ಸಮೀಪವಿದ್ದ ಬಚ್ಚಲು ಮನೆಯ ಒಲೆಯಿಂದ ಬೆಂಕಿಯು ಹರಡಿದ್ದು ಅದು ತನ್ನ ಕೆನ್ನಾಲಿಗೆಯನ್ನು ಕೊಟ್ಟಿಗೆಗೂ ಚಾಚಿತು. ಈ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿದ್ದ 3 ದನಗಳನ್ನು ರಕ್ಷಿಸಲು ಲೋಕೇಶ್ ಮುಂದಾಗಿದ್ದು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಅದಾಗಲೇ ಅಗ್ನಿಯ ಜ್ವಾಲೆ ಆತನ ಶೇ. 80 ರಷ್ಟು ದೇಹವನ್ನು ಆವರಿಸಿದ್ದು ಆತನನ್ನು ಬಳಿಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ