Sunday, January 19, 2025
ಹೆಚ್ಚಿನ ಸುದ್ದಿ

ತೆರೆಗೆ ಬರಲಿದೆ ನಿರ್ದೇಶಕ ಮಿಲನ್ ಭೌಮಿಕ್ ಆ್ಯಕ್ಷನ್ ಕಟ್ ಹೇಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಚಿಂತನೆ ಆಧಾರಿತ ಸಿನಿಮಾ-ಕಹಳೆ ನ್ಯೂಸ್

ನವದೆಹಲಿ : ನಿರ್ದೇಶಕ ಮಿಲನ್ ಭೌಮಿಕ್ ಆ್ಯಕ್ಷನ್ ಕಟ್ ಹೇಳಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಚಿಂತನೆ ಆಧಾರಿತ ಸಿನಿಮಾವೊಂದು ತಯಾರಿಯಾಗುತ್ತಿದ್ದು, ಇದರ ಪ್ರಮುಖ ಪಾತ್ರದಲ್ಲಿ ಮಹಾಭಾರತ ಧಾರವಾಹಿ ಖ್ಯಾತಿಯ ಗಜೇಂದ್ರ ಚೌಹಣ್ ಅಭಿನಯಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಿನಿಮಾದ ಕುರಿತು ಮಾಹಿತಿ ನೀಡಿರುವ ನಿರ್ದೇಶಕ ಭೌಮಿಕ್, ಈ ಸಿನಿಮಾಗೆ ಏಕ್ ಔರ್ ನರೇನ್ ಎಂಬ ಶೀರ್ಷಿಕೆ ಇಡಲಾಗಿದ್ದು, ಸಿನಿಮಾದಲ್ಲಿ ಎರಡು ಕಥಾ ಹಂದರವಿರಲಿದ್ದು, ಸಿನಿಮಾ ಎರಡು ರೀತಿಯ ವ್ಯಕ್ತಿತ್ವವನ್ನು ಹೊಂದಿರುವ ಕಥೆ ಆಧಾರಿಸಿರುತ್ತದೆ. ಒಂದು ಸ್ವಾಮಿ ವಿವೇಕಾನಂದರವರ ಜೀವನ ಸಾಧನೆ ಹೊಂದಿದ್ದರೆ ಮತ್ತೊಂದು ಮೋದಿಯವರ ಚಿಂತನೆ ಕುರಿತ ಕಥೆಯನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಇನ್ನು ಮಾರ್ಚ್ 12 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಕೋಲ್ಕತ್ತಾ ಮತ್ತು ಗುಜರಾತ್‍ನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಿನಿಮಾವನ್ನು ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು