Monday, January 20, 2025
ಬೆಂಗಳೂರು

ರಾಬರ್ಟ್ ಮೇಕಿಂಗ್ ವಿಡಿಯೋ ರಿಲೀಸ್ ಇಂದಿನಿಂದ ಶುರು-ಕಹಳೆ ನ್ಯೂಸ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಇದಕ್ಕೂ ಮೊದಲು ಚಿತ್ರತಂಡ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ದೇಶಕ ತರುಣ್ ಸುಧೀರ್ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಮೂರು ಎಪಿಸೋಡ್ ಗಳಲ್ಲಿ ರಾಬರ್ಟ್ ಮೇಕಿಂಗ್ ವಿಡಿಯೋವನ್ನು ಯೂ ಟ್ಯೂಬ್ ಮೂಲಕ ಚಿತ್ರತಂಡ ಬಿಡುಗಡೆ ಮಾಡಲಿದೆ. ಮಾರ್ಚ್ 11 ರಿಂದ ಚಿತ್ರ ತೆರೆಗೆ ಬರಲಿದ್ದು, ಇದಕ್ಕೂ ಮುನ್ನ ಮೂರು ದಿನಗಳಲ್ಲಿ ಮೂರು ವಿಡಿಯೋ ರಿಲೀಸ್ ಆಗಲಿದೆ. ಇಂದನಿಂದ ಬುಕ್ ಮೈ ಶೋನಲ್ಲಿ ಆನ್ ಲೈನ್ ಟಿಕೆಟ್ ಬುಕಿಂಗ್ ಕೂಡಾ ತೆರೆಯಲಾಗಿದೆ. ಅಭಿಮಾನಿಗಳೂ ಡಿ ಬಾಸ್ ಕಟೌಟ್ ಗಳನ್ನು ನಿಲ್ಲಿಸಿ, ತಮ್ಮದೇ ರೀತಿಯಲ್ಲಿ ರಾಬರ್ಟ್ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ.