ಬೈಕ್ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣದ ಆರೋಪಿಗೂ ವಿಶ್ವ ಹಿಂದೂ ಪರಿಷತ್‍ಗೂ ಸಂಬಂಧವಿಲ್ಲ’; ವಿ.ಹಿ.ಪ ಭಜರಂಗದಳ ಮಂಗಳೂರು ಸ್ಪಷ್ಟನೆ-ಕಹಳೆ ನ್ಯೂಸ್
ಮಂಗಳೂರು : ಬೈಕ್ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣದಲ್ಲಿ ಭಾಗಿಯಾದ ಆರೋಪಿ ವಿಶ್ವ ಹಿಂದೂ ಪರಿಷತ್‍ನ ಸಂಚಾಲಕ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ಪ್ರಕರಣದ ಕುರಿತು ವಿಶ್ವ ಹಿಂದು ಪರಿಷತ್ ಬಜರಂಗದಳ ಸ್ಪಷ್ಟೀಕರಣ ನೀಡಿದೆ.
ಆರೋಪಿ, ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ವಿಶ್ವ ಹಿಂದೂ ಪರಿಷತ್‍ನ ಹಿಂದಿನ ಸಂಚಾಲಕ, ಕೆಲವು ತಿಂಗಳ ಹಿಂದೆ ಕೆಲವೊಂದು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ ಅವರನ್ನು ಕಳೆದ 6 ತಿಂಗಳ ಹಿಂದೆಯೇ ಸಂಘಟನೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿದೆ. ಆದ್ದರಿಂದ ಆತ ಎಸಗಿದ ಕೃತ್ಯಗಳಿಗೂ ಸಂಘಟನೆಗೂ ಯಾವುದೇ ಸಂಭಂಧವಿರುವುದಿಲ್ಲ. ಉದ್ದೇಶ ಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯ ಹೆಸರನ್ನು ಕೆಡಿಸುವ ಸಲುವಾಗಿ ಸಂದೇಶ ರವಾನೆಯಾಗುತ್ತಿದೆ.ಮುಂದಕ್ಕೆ ಈ ಸಂದೇಶ ರವಾನೆಯಾದಲ್ಲಿ ಪೋಲೀಸ್ ಇಲಾಖೆ ಮುಖಾಂತರ ಅಂತಹ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ.