Sunday, November 24, 2024
ಹೆಚ್ಚಿನ ಸುದ್ದಿ

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ NWF ಉಪ್ಪಿನಂಗಡಿ ವತಿಯಿಂದ ಸಾಧಕರಿಗೆ ಸನ್ಮಾನ ಮತ್ತು ವಿವಿಧ ಸಾಮಾಜಿಕ ಕಾರ್ಯಕ್ರಮ-ಕಹಳೆ ನ್ಯೂಸ್

ಉಪ್ಪಿನಂಗಡಿ : ಮಾರ್ಚ್ 8ರಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಉಪ್ಪಿನಂಗಡಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಬದಲಾವಣೆಗಾಗಿ ಧ್ವನಿ ಎತ್ತೋಣ ಎಂಬ ಧ್ಯೇಯದೊಂದಿಗೆ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಮ್ತಾಜ್ ರವರು ನಿರ್ವಹಿಸಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹರಿನಾಕ್ಷಿ ಕೆ. ಕಕ್ಕೆಪದವು ರವರು ಮಾತನಾಡಿ ಪ್ರಸ್ತುತ ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ , ಶೋಷಣೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು ಇದರ ವಿರುದ್ಧ ಸಮಾಜದ ಎಲ್ಲಾ ವರ್ಗದ ಜನರು ಮತ್ತು ಸಂಘಸಂಸ್ಥೆಗಳು ಒಟ್ಟುಗೂಡಿ ಧ್ವನಿಯೆತ್ತಬೇಕಾಗಿದೆ. ಅದೇ ರೀತಿ ನ್ಯಾಷನಲ್ ವುಮೆನ್ಸ್ ಫ್ರಂಟಿನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರಾದ ಇಸ್ಮತ್ ರವರು ಮಹಿಳೆಯರ ವಿದ್ಯಾಭ್ಯಾಸದ ಮಹತ್ವದ ಕುರಿತು ವಿಶ್ಲೇಷಣೆ ನೀಡಿದರು. ಸಾಜಿದಾ ನೆಲ್ಯಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಇಬ್ಬರು ಮಹಿಳಾ ಸಾಧಕರಾದ ಅವ್ವಮ್ಮ ಕೂಟೇಲು ಮತ್ತು ಅಲಿಮ ಸುಮ ಆತೂರು ರವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಉಪ್ಪಿನಂಗಡಿ ಸರಕಾರಿ ಸಮುದಾಯ ಅಸ್ಪತ್ರೆಯ ಕೊರೋನಾ ವಾರಿಯರ್ಸ್ ಮತ್ತು ಸಿಬ್ಬಂದಿ ಗಳಿಗೆ ಹಾಗೂ ತ್ಯಾಜ್ಯ ನಿರ್ವಹಣಾ ಘಟಕದ ಮಹಿಳಾ ಸಿಬ್ಬಂದಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಾಜಿದಾ ಅಗ್ನಾಡಿ ಸ್ವಾಗತಿಸಿ ಝರೀನ ನಿರೂಪಿಸಿದರು.