ಮಂಜೇಶ್ವರ ತಾಲೂಕಿನ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಿ. ಕುರುಡಪದವು ಇದರ ವತಿಯಿಂದ ಸಂಗೀತ, ಸಂಸ್ಮರಣೆ, ಸನ್ಮಾನ, ಬಯಲಾಟ ಕಾರ್ಯಕ್ರಮ-ಕಹಳೆ ನ್ಯೂಸ್
ಬಂಟ್ವಾಳ : ಮಂಜೇಶ್ವರ ತಾಲೂಕಿನ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಿ. ಕುರುಡಪದವು ಇದರ ವತಿಯಿಂದ ವರ್ಷಂಪ್ರತಿ ನಡೆಸುವ ಸಂಸ್ಮರಣಾ ಕಾರ್ಯಕ್ರಮ ಈ ಬಾರಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 13 ಶನಿವಾರದ0ದು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದಿ| ಕುರಿಯ ವಿಠಲ ಶಾಸ್ತ್ರಿ, ದಿ| ನಿಡ್ಲೆ ನರಸಿಂಹ ಭಟ್, ಹಾಗೂ ದಿ| ಕರುವೋಳು ದೇರಣ್ಣ ಶೆಟ್ಟರ ಸಂಸ್ಮರಣೆ ಹಾಗೂ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಗಂಟೆ 3 ರಿಂದ ವಿದ್ಯಾಜಯರಾಮ್ ಕಜೆ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಹಾಗೂ ವಯಲಿನ್‍ನಲ್ಲಿ ಜ್ಯೋತಿಲಕ್ಷ್ಮಿ ಬಲಿಪಗುಳಿ ಸಹಕರಿಸಲಿದ್ದಾರೆ. ಬಳಿಕ ಸಂಜೆ ಗಂಟೆ 5 ರಿಂದ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ ವಿದ್ವಾಂಸರೂ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಾದ ಶ್ರೀಧರ ಹಂದೆಯವರಿಗೂ, ಖ್ಯಾತ ಛಾಂದಸರೂ, ಹಿಮ್ಮೇಳ ಗುರುಗಳೂ ಆದ ಶ್ರೀ ಗಣೇಶ್ ಕೊಲೆಕಾಡಿಯವರಿಗೂ, ಖ್ಯಾತ ಯಕ್ಷಗಾನ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರಿಗೂ ಕುರಿಯ, ನಿಡ್ಲೆ, ಕರುವೋಳು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಗೆನಾಡು ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಮುಗುಳಿ ತಿರುಮಲೇಶ್ವರ ಭಟ್ ವಹಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್‍ರಾವ್ ಚಿಗುರುಪಾದೆ ಸಂಸ್ಮರಣಾ ಭಾಷಣ ಮಾಡಲಿದ್ದು, ಸೇರಾಜೆ ಗೋಪಾಲ ಕೃಷ್ಣ ಭಟ್ಟರು ಅಭಿನಂದಿಸಲಿದ್ದಾರೆ. ವಿಟ್ಲದ ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು ಸತೀಶ್ ಆಳ್ವ ಇರಾ, ಹಾಗೂ ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಸೇರಾಜೆ ಸತ್ಯನಾರಾಯಣ ಭಟ್ ಶುಭಾಶಂಸನೆಗೈಯ್ಯಲಿದ್ದಾರೆ. ಸಂಜೆ ಗಂಟೆ 7 ರಿಂದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ, ರಕ್ತರಾತ್ರಿ ಹಾಗೂ ಮೈರಾವಣ ಕಾಳಗ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.