Recent Posts

Sunday, January 19, 2025
ರಾಜಕೀಯ

ಮಂಡ್ಯದಿಂದ ಅಂಬರೀಷ್ ಹೆಸರು ಕೈಬಿಟ್ಟ ಹೈಕಮಾಂಡ್ ? ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಚಿಂತನೆ – ಕಹಳೆ ನ್ಯೂಸ್

ನವದೆಹಲಿ :ವಿಧಾನಸಭೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಅಂಬರೀಶ್ ಸೇರಿದಂತೆ ಘಟಾನುಘಟಿ ನಾಯಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ.ಮುಂದಾಗುವ ಬಂಡಾಯವನ್ನು ಶಮನ ಮಾಡಲು ಹೈ ಕಮಾಂಡ್ ಹೊಸ ಸೂತ್ರ ರೂಪಿಸಿದೆ. ಅಂಬರೀಶ್ ಅವರಲ್ಲದೆ ಬಾದಾಮಿಯಿಂದ ಬಿ.ಬಿ ಚಿಮ್ಮನಕಟ್ಟಿ, ಹಾನಗಲ್‌ನಿಂದ ಮನೋಹರ್ ತಹಶೀಲ್ದಾರ್, ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪಗೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ, ರಾಜ್ಯ ಸರಕಾರದ ವಿರುದ್ದ ಸಿಟ್ಟಾಗಿದ್ದ ಅಂಬರೀಶ್ ತದನನಂತರದ ದಿವಸದಲ್ಲಿ ಹೆಚ್ಚಾಗಿ ಪಕ್ಷದ ಜೊತೆಗೆ ಕಾಣಿಸಿಕೊಳ್ಳಲಿಲ್ಲ. ಜತೆಗೆ ಟಿಕೇಟ್’ಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಪಕ್ಷದ ಹೈ ಕಮಾಂಡ್ ಹಲವು ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡುವ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಹಲವು ಬಾರಿ ಮನವಿ ಮಾಡಿದೆ. ಆದರೂ ಕ್ಯಾರೆ ಎನ್ನದೆ ಅಂಬರೀಷ್ ಮೌನ ವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುದು ಎನ್ನುವ ಹೇಳಿಕೆ ಹಿನ್ನೆಲೆಯಲ್ಲಿ ನನಗೂ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆ ಅವರದಿರಬಹದು. ಆದರೆ ಅಂಬರೀಷ್ ಆರೋಗ್ಯದ ನೆಪ ಮಾಡಿಕೊಂಡು ಟಿಕೆಟ್ ನೀಡದಿರಲು ಹೈಕಮಾಂಡ್ ಮುಂದಾಗಿದೆ.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಬರೀಷ್ ಅವರಿಗೆ ಟಿಕೆಟ್ ಕೊಡಿಸಲು ಒಲವು ಇದೆ. ಮಂಡ್ಯಲ್ಲಿ ಒಕ್ಕಲಿಗರ ಮತ ಸೆಳೆಯಲು ಅನುಕೂಲವಾಗುವಂತೆ ಅಂಬರೀಷ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನೂ ಒಲವಿದೆ.

ಆರೋಗ್ಯ ಸರಿ ಇರದ ಕಾರಣ ನನ್ನ ಪತ್ನಿಗೆ ಟಿಕೇಟ್ ನೀಡುವಂತೆ ಹೈಕಮಾಂಡ್ ಬಳಿ ಅಂಬರೀಷ್ ಮನವಿ ಮಾಡಿಕೊಂಡಿದ್ದರು ಎನ್ನುವ ಮಾತೊಂದು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.ಒಂದು ವೇಳೆ ಮಂಡ್ಯದಿಂದ ಅಂಬರೀಷ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದರೆ ಪತ್ನಿ ಸುಮಲತಾ ಅಂಬರೀಷ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.