Monday, January 20, 2025
ಪುತ್ತೂರು

ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ, ಸ್ತ್ರೀ ಭಾರತೀಯ ಸಂಸ್ಕøತಿಯ ತಳಪಾಯ; ಸುಜನಿ ಬೋರ್ಕರ್-ಕಹಳೆ ನ್ಯೂಸ್

ಪುತ್ತೂರು : ಭಾರತೀಯ ಸಂಸ್ಕøತಿಯ ತಳಪಾಯವೇ ಸ್ತ್ರೀ. ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ಅಪಾರವಾದ ಮಹತ್ವವಿದೆ. ಹೆಣ್ಣು ಕಣದಿಂದ ಜೀವವನ್ನು ಸೃಷ್ಟಿಸುವಂತಹವಳು ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಸಿಬಿಎಸ್‍ಇ ಸಂಸ್ಥೆ ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಸುಜನಿ ಬೋರ್ಕರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆಯಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸ್ತ್ರೀಯಲ್ಲಿ ಅಪಾರವಾದ ಶಕ್ತಿ ಅಡಗಿದೆ. ಹೀಗಿರುವಾಗ ಕೇವಲ 33 ಶೇಕಡಾ ಮೀಸಲಾತಿಯ ಬಗೆಗೆ ಮಾತ್ರ ಚಿಂತಿಸದೆ ತನ್ನೆಲ್ಲಾ ಪ್ರತಿಭೆಯನ್ನು ಹೊರಗೆಡಹುವ ಬಗೆಗೆ ಯೋಚಿಸಬೇಕು ಎಂದರಲ್ಲದೆ ಹೆಣ್ಣಿನಲ್ಲಿ ಹೆಚ್ಚಿನ ಹೃದಯಶೀಲತೆ ಇರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತಂದೆಯ ಹೊರತಾಗಿಯೂ ಮಕ್ಕಳನ್ನು ಬೆಳೆಸುವ, ಅವರ ಭೌತಿಕ, ಮಾನಸಿಕ ಬೆಳವಣಿಗೆಗೆ ಸ್ಪಂದಿಸುವ ಸಾಮಥ್ರ್ಯ ಹೆಣ್ಣಿಗಿದೆ. ಆದ್ದರಿಂದ ಹೆಣ್ಣಾಗಿ ಹುಟ್ಟುವುದು ಪುಣ್ಯವೆಂದು ಭಾವಿಸಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ಇಲ್ಲಿ ಪ್ರತಿಯೊಂದು ವಸ್ತು ವಿಷಯಗಳಲ್ಲೂ ಹೆಣ್ಣನ್ನು ಕಾಣುವ ಸಂಪ್ರದಾಯವಿದೆ. ನದಿ, ಮಳೆ, ಬೆಳೆಗಳೆಲ್ಲದರಲ್ಲೂ ಹೆಣ್ಣನ್ನು ಗುರುತಿಸಲಾಗುತ್ತದೆ. ಭೂಮಿಯನ್ನೂ ತಾಯಿಯೆಂದೇ ಕರೆಯಲಾಗುತ್ತದೆ. ಹೀಗಿರುವಾಗ ಹೆಣ್ಣನ್ನು ಆರಾಧಿಸಬೇಕಾದ್ದು ಸಮಾಜದ ಜವಾಬ್ಧಾರಿ ಎಂದರು. ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ ಹೆಣ್ಣಿಗೆ ಇನ್ನೂ ತನ್ನ ಶಕ್ತಿಯ ಅರಿವು ಪೂರ್ಣವಾಗಿ ಮೂಡಿಲ್ಲ. ಹಾಗಾಗಿಯೇ ಸ್ವತಃ ಸ್ತ್ರೀಯರೇ ತಮಗೆ ಗಂಡು ಮಕ್ಕಳು ಇರಲಿ ಎಂದು ಬಯಸುತ್ತಿದ್ದಾರೆ. ಸ್ತ್ರೀಯರಿಗೆ ಸ್ತ್ರೀಯರೇ ಶತ್ರು ಎಂಬ ಮಾತಿದೆ. ಆದರೆ ಅದಕ್ಕೆ ಆಸ್ಪದ ನೀಡದೆ ಬೆಳೆಯಬೇಕಿದೆ. ಸ್ತ್ರೀಯರನ್ನು ಪೂಜಿಸುತ್ತಾ ಗೌರವದಿಂದ ಕಾಣುವುದರಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರಲ್ಲದೆ ಸ್ತ್ರೀ ಸಬಲೀಕರಣ ದುರುಪಯೋಗವಾಗಬಾರದು ಎಂದು ನುಡಿದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಉಪನ್ಯಾಸಕಿಯರು, ಮಹಿಳಾ ಉಪನ್ಯಾಸಕೇತರ ವೃಂದ, ಪದವಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ವಿದ್ಯಾಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾಥಿನಿ ಸಾಯಿಶ್ವೇತಾ ವಂದಿಸಿದರು.