Monday, January 20, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಧನಾತ್ಮಕ ಪತ್ರಿಕೋದ್ಯಮ ಕುರಿತಾದ ಕಾರ್ಯಗಾರ, ಪತ್ರಕರ್ತನಾಗುವವನಿಗೆ ಭಾಷೆಯ ಮೇಲೆ ಹಿಡಿತವಿರಬೇಕು ; ಸುನೀಲ್‍ಕುಲಕರ್ಣಿ-ಕಹಳೆ ನ್ಯೂಸ್

ಪುತ್ತೂರು : ಪತ್ರಕರ್ತನಾಗುವವನಿಗೆ ಭಾಷೆಯ ಮೇಲೆ ಹಿಡಿತವಿರಬೇಕು ಹಾಗೂ ವಾಕ್ಯಗಳನ್ನು ಸರಿಯಾಗಿ ಹೇಗೆ ರಚಿಸಬೇಕು ಎಂಬುದನ್ನು ಸಹ ತಿಳಿದಿರಬೇಕು. ಯಾವ ವಿಷಯವನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಪ್ರಸ್ತುತ ಪಡಿಸಬೇಕು ಎಂಬ ಅರಿವಿರಬೇಕು. ಪತ್ರಿಕೋದ್ಯಮದಲ್ಲಿ ಅತೀ ಮುಖ್ಯವಾಗಿರುವುದು ಸಂಶೋಧನೆಯಾಗಿದೆ ಎಂದು ಮಂಗಳೂರು ಋತಮ್ ಭಾಷಾ ಕೇಂದ್ರ ಸಂಯೋಜಕ ಸುನೀಲ್‍ಕುಲಕರ್ಣಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ‘ಧನಾತ್ಮಕ ಪತ್ರಿಕೋದ್ಯಮ ಮತ್ತು ಸಾಮಾಜಿಕ ಜಾಲತಾಣ’ ಎಂಬ ವಿಷಯಗಳ ಕುರಿತಾಗಿ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಂಗಳವಾರ ಅವರು ಮಾತನಾಡಿದರು. ಒಂದು ವಿಷಯದ ಕುರಿತು ಮಾತನಾಡುವ ಮುನ್ನ ನಾವು ಆವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ನಾವು ಹೇಳುವುವಂತಹ ಪ್ರತಿ ವಿಷಯವೂ ಓದುಗರ ಮನಸ್ಸಿಗೆ ನಾಟುವಂತೆ ಇರಬೇಕು. ಸಾಮಾಜಿಕ ಜಾಲತಾಣವು ಇಂದು ಪತ್ರಿಕೋದ್ಯಮದ ಮೇಲೆ ಅಗಾಧವಾದ ಪ್ರಭಾವವನ್ನು ಬೀರುತ್ತಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಸಾಮಾಜಿಕ ಜಾಲತಾಣವು ಸಮಾಜದ ಇಡೀ ದಿಕ್ಕನ್ನೇ ಬದಲಾಯಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಧನಾತ್ಮಕ ಪತ್ರಿಕೋದ್ಯಮದ ಕುರಿತಾಗಿ ಮಾಹಿತಿ ನೀಡಿದ ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ಮಂಗಳೂರು ಋತಮ್ ಭಾಷಾ ಕೇಂದ್ರದ ಸಂಪಾದಕ ವಿವೇಕ್ ಆದಿತ್ಯ ಮಾತನಾಡಿ, ಧನಾತ್ಮಕ ಪತ್ರಿಕೋದ್ಯಮವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇದನ್ನು ರಚನಾತ್ಮಕ ಪತ್ರಿಕೋದ್ಯಮ ಎಂದು ಕರೆಯಲಾಗುತ್ತದೆ. ಯುವ ಸಮುದಾಯಕ್ಕೆ ಪತ್ರಿಕೋದ್ಯವನ್ನು ಮುಂದೆ ತೆಗೆದು ಕೊಂಡುವ ಹೋಗುವ ಜವಾಬ್ದಾರಿಯನ್ನು ಹೊಂದಿದೆ. ಪತ್ರಕರ್ತನು ಯಾವ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಹಾಗೂ ನೀಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಪತ್ರಕರ್ತನು ವಿಷಯದಲ್ಲಿ ಆಡಗಿರುವ ತಪ್ಪು-ಸರಿಗಳನ್ನು ಅರಿತು ಸರಿಯಾದ ವರದಿಯನ್ನು ತಯಾರಿಸುವ ಮೂಲಕ ಜನರಿಗೆ ಪ್ರೇರಣೆಯಾಗುವಂತ ಪರ್ತಕರ್ತನಾಗಿರಬೇಕು ಎಂದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯರಾದ ಭವ್ಯ ಪಿ.ಆರ್.ನಿಡ್ಪಳ್ಳಿ, ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ, ಸೀಮಾ ಪೋನಡ್ಕ, ಉಪನ್ಯಾಸಕ ಅಕ್ಷತ್ ಭಟ್ ಉಪಸ್ಥಿತರಿದ್ದರು. ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ಜಗದೀಶ್ ಸ್ವಾಗತಿಸಿ, ವಿದ್ಯಾರ್ಥಿನಿ ಪವಿತ್ರ ಭಟ್ ವಂದಿಸಿದರು. ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಆಶಿಕಾ ಸಾಲೆತ್ತೂರು ನಿರೂಪಿಸಿದರು.