Monday, January 20, 2025
ಪುತ್ತೂರು

ಜೀವನ ವೆಂಬುದು ಸುಲಭದ ಹಾದಿಯಲ್ಲ ; ಎಂ. ಎಸ್. ವೈಷ್ಣವಿ-ಕಹಳೆ ನ್ಯೂಸ್

ಪುತ್ತೂರು : ಸೋಲು ನಮ್ಮ ಜೀವನದಲ್ಲಿ ಶಾಶ್ವತವಲ್ಲ, ಆ ಸೋಲು ಗೆಲುವಿನತ್ತ ದಾರಿ ತೋರಿಸುತ್ತೆ ಎಂಬುಂದನ್ನು ನಾವು ಮನಗಾಣಬೇಕು ಕಷ್ಟಪಟ್ಟರೆ ಮಾತ್ರ ಗುರಿ ಸಾಧಿಸಲು ಸಾಧ್ಯ. ನಾವು ಆಯ್ಕೆ ಮಾಡುವ ಗುರಿ ಯಾವಗಾಲೂ ಎತ್ತರವಾಗಿಬೇಕು. ಅದನ್ನು ತಲುಪುವುದು ಅಸಾಧ್ಯವೆನಿಸಿದರೂ ಪ್ರಯತ್ನ ಪಡುವುದನ್ನು ಬಿಡಬಾರದು. ಜೀವನ ವೆಂಬುದು ಸುಲಭದ ಹಾದಿಯಲ್ಲ ಎಂದು ಬೆಂಗಳೂರಿನ ಟೆಸ್ಕೋ ಸಂಸ್ಥೆಯ ಹೆಚ್.ಆರ್. ಆಫೀಸರ್ ಎಂ.ಎಸ್. ವೈಷ್ಣವಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ಪಯಣ’ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು. ಯಾವುದೇ ಚಿಕ್ಕ ಉದ್ಯೋಗವನ್ನು ಕೇವಲವಾಗಿ ನೋಡದೆ, ಸಿಕ್ಕ ಉದ್ಯೋಗದಿಂದಲೇ ಇನ್ನು ಹೆಚ್ಚಿನ ಹಂತಕ್ಕೆ ಹೋಗಲು ಸಾಧ್ಯ. ಕಲಿತ ವಿದ್ಯೆಗೆ ತಕ್ಕಂತೆ ಕೂಡಲೇ ಉದ್ಯೋಗಗಳು ಸಿಗುವುದು ಕಷ್ಟ. ಅಂಕ ಎಂಬುದು ಮುಖ್ಯವಲ್ಲ, ಅದರ ಜತೆಯಲ್ಲೇ ಇತರ ಕೌಶಲ್ಯವನ್ನು ಕೂಡ ಹೊಂದಿರುವುದು ತುಂಬ ಮುಖ್ಯವಾಗಿದೆ. ಸಿಕ್ಕ ಅವಕಾಶಗಳಿಂದ ಪ್ರಯೋಜನವನ್ನು ಪಡೆಯುವುದನ್ನು ಕಲಿಯಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಅವಕಾಶಗಳೆಂಬುದು ಕೇವಲ ಒಂದು ಸಲ ಬರಲು ಸಾಧ್ಯ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಜೀವನದಲ್ಲಿ ಮುಂದುವರೆಯುವ ದಾರಿ ಸುಗಮವಾಗಬೇಕಾದರೆ ಸರಿಯಾದ ಮಾರ್ಗದರ್ಶನವನ್ನು ನೀಡುವವರು ಕೂಡ ಬೇಕು. ನಿಮ್ಮ ನಿಮ್ಮ ಗುರಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು. ಎಲ್ಲರ ದಾರಿಯು ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಅನುಭವಗಳು ನಮ್ಮ ಜೀವನದ ಮುಂದಿನ ಹಾದಿಗೆ ದಾರಿದೀಪವಿದ್ದಂತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ವಿಜಯ ಸರಸ್ವತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರೂಪ, ಅನುಶ್ರೀ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಮನೀಷ ಶೆಟ್ಟಿ ಸ್ವಾಗತಿಸಿ, ಸ್ವಾತಿ ಕಾರಂತ್ ವಂದಿಸಿದರು. ಕವನ ಪೈ ಕಾರ್ಯಕ್ರಮ ನಿರೂಪಿಸಿದರು.