Monday, January 20, 2025
ಬೆಳ್ತಂಗಡಿ

ಬೆಳ್ತಂಗಡಿಯ ಪಟ್ರಮೆಯಲ್ಲಿ ಮರ ತುಂಡರಿಸುವ ವೇಳೆ ಮರ ಬಿದ್ದು ಮೂವರು ದುರ್ಮರಣ- ಕಹಳೆನ್ಯೂಸ್

ಬೆಳ್ತಂಗಡಿ : ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಸಮೀಪ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ ಧೂಪದ ಮರ ತುಂಡರಿಸುವ ವೇಳೆ ಮರ ಬಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನದ ವೇಳೆ ಮರ ತುಂಡರಿಸುವ ವೇಳೆ ಈ ಅವಘಡ ಸಂಭವಿಸಿದ್ದು, ಮರವೊಂದನ್ನು ಕಡಿದು ಉರುಳಿಸುವ ವೇಳೆ ಮರದ ಅಡಿಗೆ ಸಿಲುಕಿದ ಪಟ್ರಮೆ ರಾಮಣ್ಣ ಕುಂಬಾರ ಅವರ 21 ವರ್ಷದ ಪುತ್ರ ಪ್ರಶಾಂತ್, ಸೇಸಪ್ಪ ಪೂಜಾರಿ ಅವರ 23 ವರ್ಷದ ಪುತ್ರ ಸ್ವಸ್ತಿಕ್, ಮತ್ತೋರ್ವ ಸುರೇಶ್ ಮೃತ ಪಟ್ಟ ದುರ್ದೈವಿಗಳು.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ಕುಮಾರ್, ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.