Tuesday, January 21, 2025
ಪುತ್ತೂರು

ಜನರಿಗೆ ಹಾಸ್ಯ ನಾಟಕಗಳ ಮೇಲಿನ ಒಲವು ತುಳು ರಂಗಭೂಮಿಯಲ್ಲಿ ನಾಟಕದ ಸ್ವರೂಪಗಳನ್ನು ಬದಲಾಯಿಸಲು ಕಾರಣವಾಯಿತು; ವಿಜಯಕುಮಾರ್ ಕೊಡಿಯಾಲ್‍ಬೈಲು- ಕಹಳೆ ನ್ಯೂಸ್

ಪುತ್ತೂರು : ನಾಟಕದ ಅಭಿನಯಿಸುವ ಕಲಾವಿದರಿಗೆ ಯಾವುದೇ ರೀತಿಯ ಸಂಭಾವನೆಗಳು ಸಿಗುತ್ತಿರಲಿಲ್ಲ. ಹಿಂದೆ ನಾಟಕ ಪ್ರದರ್ಶನ ಸಮಯದಲ್ಲಿ ಹಾಸ್ಯ ಪಾತ್ರಗಳು ಬಂದಾಗ ಮಾತ್ರಜನ ವೀಕ್ಷಿಸುತ್ತಿದ್ದರು. ಜನರಿಗೆ ಹಾಸ್ಯ ನಾಟಕಗಳ ಮೇಲಿನ ಒಲವು ತುಳು ರಂಗಭೂಮಿಯಲ್ಲಿ ನಾಟಕದ ಸ್ವರೂಪಗಳನ್ನು ಬದಲಾಯಿಸಲು ಕಾರಣವಾಯಿತು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ವಿಜಯಕುಮಾರ್ ಕೊಡಿಯಾಲ್‍ಬೈಲು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಕಾಲೇಜಿನ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ಒಂದು ದಿನದ ‘ರಂಗ ವಿಮರ್ಶಾಕಮ್ಮಟ’ ಪ್ರಯುಕ್ತ ನಡೆದ ಗೋಷ್ಟಿಯಲ್ಲಿ ‘ಇಂದಿನ ದಿನಗಳಲ್ಲಿ ತುಳು ರಂಗ ಭೂಮಿಯ ಸ್ಥಿತಿಗತಿ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ತುಳು ರಂಗಭೂಮಿ ಬೆಳೆಯಲು ಬದಲಾವಣೆಯನ್ನು ಅಗತ್ಯವಿತ್ತು. ಪೌರಾಣಿಕ ನಾಟಕಗಳ ಜೊತಗೆ ಹಾಸ್ಯ ನಾಟಕಗಳು ಅವಶ್ಯಕವಾಗಿತ್ತು. ನಂತರ ಮಂಗಳೂರಿನಲ್ಲಿ ಬಲೆ ತೆಲಿಪಾಲೆ ಕಾರ್ಯಕ್ರಮ ಆರಂಭ ರಂಗಭೂಮಿಗೆ ಧನಾತ್ಮಕ ಹಾಗೂ ಋಣಾತ್ಮಕ ಬದಲಾವಣೆಯನ್ನು ತಂದಿದೆ. ಹೊಸ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿದೆ ಎಂದು ಅಭಿಪ್ರಾಯಪಟ್ಟರು. ರಂಗ ಭೂಮಿಯ ಕಲಾವಿದರನ್ನು ಪೂಜಿಸಿದ್ದು ರಂಗಭೂಮಿ ದಿಕ್ಕು ತಪ್ಪಲು ಕಾರಣವಾಗಿದೆ. ತುಳು ಸಿನಿಮಾಗಳಿಗೆ ಥಿಯೇಟರ್‍ಗಳು ಸಿಗುತ್ತಿಲ್ಲ. ಮಾದ್ಯಮಗಳು ತುಳು ಸಿನಿಮಾ ಹಾಗೂ ನಾಟಕರಂಗ ಬೆಳೆಯುವಲ್ಲಿ ಸಹಕರಿಸಬೇಕು ಎಂದು ನುಡಿದರು. ರಾಜ್ಯ ಪ್ರಶಸ್ತಿ ಪುರಸ್ಕøತ ನಟ ಎಂ. ಕೆ ಮಠಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ಕಾರ್ಯಕ್ರಮ ನಿರ್ವಹಿಸಿದರು.