2021ನೇ ಸಾಲಿನ ಜೆಇಇ ಮೈನ್ಸ್ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಮೂಡಬಿದಿರೆ ವಿದ್ಯಾರ್ಥಿಗಳು-ಕಹಳೆ ನ್ಯೂಸ್
ಮೂಡಬಿದಿರೆ : 2021ನೇ ಸಾಲಿನ ಜೆಇಇ ಮೈನ್ಸ್ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಮೂಡಬಿದಿರೆ ಇಲ್ಲಿನ ವಿದ್ಯಾರ್ಥಿ ವಿಘ್ನೇಶ್ ಹೆಚ್ ನಾಯಕ್ ಇವರು 98.902 ಅಂಕ ಪಡೆದು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
ಒಟ್ಟು ಮೂರು ಬಾರಿ ಪರೀಕ್ಷೆ ಬರೆಯಲು ಎನ್ ಟಿ ಎ ಅವಕಾಶ ಮಾಡಿಕೊಟ್ಟಿದ್ದು ಕೋವಿಡ್‍ನಿಂದಾಗಿ ಪಠ್ಯ ಚಟುವಟಿಕೆ ಸ್ಥಗಿತಗೊಂಡಿದ್ದರೂ ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಒಟ್ಟು 11 ವಿದ್ಯಾರ್ಥಿಗಳು 90%ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.
ವಿನಾಯಕ್ ಸಿ (97.764), ಶ್ರೀನಿಧಿ ಸೋಮಯಾಜಿ (97.395), ಸುಮುಖ್ ಎಸ್ (95.268), ಅನಿಲ್ ಈರನ್ನ ಕೆ (93.742), ಪ್ರಜ್ವಲ್ ಎಸ್ ಭಟ್ (92.139), ಯಶವಂತ್ ಜಿ ಎಸ್ (92.452), ವೈ ಕಾರ್ತಿಕ್ ರಾಮ್ (91.458), ಮೋಹಿತ್ ಗೌಡ (90.999), ಶ್ರೀನಿವಾಸ್ ಎಲ್ ಎಮ್ (90.680), ಸುಮಂತ್ ಎಮ್ ಎನ್ (90.704).ಅಂಕವನ್ನು ಪಡೆದವರು.
ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಹಾಗೂ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಇವರು ಹರ್ಷ ವ್ಯಕ್ತಪಡಿಸಿರುತ್ತಾರೆ.