Monday, January 20, 2025
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿ ಠಾಣೆಯಿಂದ ಈರಯ್ಯ ಔಟ್ ; ಖಡಕ್ ಅಧಿಕಾರಿ ಕುಮಾರ್ ಕಾಂಬ್ಳೆ ಇನ್ – ಕಹಳೆ ನ್ಯೂಸ್

ಉಪ್ಪಿನಂಗಡಿ: ಈ ಹಿಂದೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ್.ಸಿ.ಕಾಂಬ್ಳೆ ಯವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪಿಎಸ್ಐ ಆಗಿ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಹಾಗೆಯೆ ಉಪ್ಪಿನಂಗಡಿ ಠಾಣೆಯ ಪಿಎಸ್ಐ ಈರಯ್ಯ ರನ್ನು ವರ್ಗಾವಣೆ ಮಾಡಿದ್ದು, ಆದರೆ ಕರ್ತವ್ಯದ ಠಾಣೆ ಮತ್ತು ಜವಾಬ್ದಾರಿಯ ಮಾಹಿತಿಯನ್ನು ಈವರೆಗೆ ತಿಳಿಸಿಲ್ಲ.

ಈರಯ್ಯ ವರ್ಗಾವಣೆ ಹಿಂದೆ ಉಪ್ಪಿನಂಗಡಿಯ ಪ್ರಭಾವಿ‌ ಉದ್ಯಮಿಯೊಬ್ಬರ ಪ್ರಭಾವ ಇವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಈರಯ್ಯರವರು ಪ್ರತಿಷ್ಠಿತ ಉದ್ಯಮಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದೇ ವರ್ಗಾವಣೆಗೆ ಕಾರಣ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈರಯ್ಯ ವರ್ಗಾವಣೆ ಜಿಲ್ಲೆಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು