ಬೆಂಗಳೂರು : ಸಾರಿಗೆ ನೌಕರರ ಒಕ್ಕೂಟ, ಕೊಟ್ಟ ಭರವಸೆ ಈಡೇರಿಸದೇ ಹೋದರೆ ಮತ್ತೆ ಬಸ್ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಹಿಂದೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಮುಷ್ಕರ ನಡೆಸಿದಾಗ ಸರ್ಕಾರ ಹೆಚ್ಚಿನ ಬೇಡಿಕೆಗಳನ್ನೂ ಈಡೇರಿಸುವುದಾಗಿ ಭರವಸೆ ಕೊಟ್ಟಿತ್ತು. ಆದರೆ ಆ ಭರವಸೆ ಈಡೇರಿಸಲು ಗಡುವು ನೀಡಿತ್ತು. ಆ ಗಡುವು ಮುಗಿದ ಮೇಲೂ ನೌಕರರ ಬೇಡಿಕೆ ಈಡೇರಿಸದೇ ಹೋದರೆ ಮುಷ್ಕರ ಅನಿವಾರ್ಯವಾಗಲಿದೆ ಎಂದು ಸಾರಿಗೆ ನೌಕರರ ಒಕ್ಕೂಟ ಹೇಳಿದೆ. ಬಜೆಟ್ ನಲ್ಲೂ ಸಾರಿಗೆ ನೌಕರರ ಬೇಡಿಕೆಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಇದರಿಂದ ನಮ್ಮ ಸಹನೆಯ ಕಟ್ಟೆಯೊಡೆದಿದೆ. 15 ನೇ ತಾರೀಖಿನೊಳಗಾಗಿ ಸೌಹಾರ್ದಯುತವಾಗಿ ಭರವಸೆ ಈಡೇರಿಸದೇ ಹೋದರೆ ಮುಷ್ಕರ ನಡೆಸಲಿದ್ದೇವೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದ್ದಾರೆ.