Monday, January 20, 2025
ಹೆಚ್ಚಿನ ಸುದ್ದಿ

ಬಿಜೆಪಿ ಧರ್ಮದೊಂದಿಗೆ ಆಟವಾಡುತ್ತಿದೆ ; ಮಮತಾ ಬ್ಯಾನರ್ಜಿ ಕಿಡಿ-ಕಹಳೆ ನ್ಯೂಸ್

ಕೋಲ್ಕತಾ : ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಧರ್ಮದೊಂದಿಗೆ ಆಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿರುವ ನಂದಿಗ್ರಾಮದಲ್ಲಿ ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ದುರ್ಗಾ ಮಂತ್ರವನ್ನು ವೇದಿಕೆಯಲ್ಲೇ ಪಠಿಸಿದರು. ತನ್ನನ್ನು ಹೊರಗಿನವಳು ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಬಂಗಾಳ ರಾಜ್ಯವನ್ನು ವಿಭಜಿಸುತ್ತಿದೆ. ಆ ಪಕ್ಷದವರು ನನ್ನನ್ನು ಹೊರಗಿನವಳು ಎಂದು ಕರೆಯುತ್ತಿದ್ದಾರೆ. ನಾನು ಹೊರಗಿನವಳಾಗಿದ್ದರೆ ಹೇಗೆ ಮುಖ್ಯಮಂತ್ರಿಯಾಗುತ್ತಿದ್ದೆ? ನಂದಿಗ್ರಾಮ ನನಗೆ ಪ್ರಿಯವಾದ ಸ್ಥಳ. ಈ ಪ್ರದೇಶವು ಗುಂಡುಗಳು ಮತ್ತು ಬಾಂಬುಗಳನ್ನು ತಡೆದುಕೊಂಡಿತ್ತು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು