Monday, January 20, 2025
ಬೆಂಗಳೂರು

ಬಂದಿದ್ದು ಸೇಲ್ಸ್ ಗರ್ಲ್ ಆಗಿ, ಮಾಡಿದ್ದು ಇ-ಮೇಲ್ ಹ್ಯಾಕ್ ; ನಾಗಾಲ್ಯಾಂಡ್ ಗ್ಯಾಂಗ್ ಅಂದರ್-ಕಹಳೆ ನ್ಯೂಸ್

ಬೆಂಗಳೂರು : ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಇ-ಮೇಲ್ ಹ್ಯಾಕ್ ಮಾಡಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್‍ನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗಾಲ್ಯಾಂಡ್‍ನಿಂದ ಬೆಂಗಳೂರಿಗೆ ನಾಲ್ಕು ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬಂದಾಕೆ ಈ ಹ್ಯಾಕ್ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದು ಈಗ ತನ್ನ ಗ್ಯಾಂಗ್‍ನ್ನೊಂದಿಗೆ ಸೆರೆವಾಸ ಅನುಭವಿಸುತ್ತಿದ್ದಾಳೆ. ಬಂಧಿತರನ್ನು ನಾಗಾಲ್ಯಾಂಡ್ ಮೂಲದ 31 ವರ್ಷದ ಥಿಯಾ , 27 ವರ್ಷದ ಸೆರೋಪಾ ಮತ್ತು ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಬಿಕಾ ಎಂದು ಗುರುತಿಸಲಾಗಿದೆ. ಇ-ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿ ಅದರ ಮೂಲಕ ಸಂದೇಶ ಕಳುಹಿಸಿ ಹಣ ದೋಚುತ್ತಿದ್ದ ಈ ಖದೀಮರು ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಇ ಮೇಲ್ ಖಾತೆಯನ್ನೇ ಹ್ಯಾಕ್ ಮಾಡಿದ್ದು, ಶಂಕರ್ ಬಿದರಿ ಅವರ ಇ-ಮೇಲ್ ಖಾತೆಯನ್ನು ಹ್ಯಾಕ್ ಮಾಡಿದ ಆರೋಪಿಗಳು ಬಿದರಿ ಅವರ ಸ್ನೇಹಿತರಿಗೆ ಹಣಕ್ಕಾಗಿ ಮೆಸೇಜ್ ಮಾಡಿದ್ದಾರೆ. ಇನ್ನು ಈ ಪೈಕಿ ಇ-ಮೇಲ್ ಮೆಸೇಜ್ ನೋಡಿದ ಬಿದರಿಯ ಸ್ನೇಹಿತರೋರ್ವರು ಬಿದರಿ ಅವರ ಖಾತೆ ಸಂಖ್ಯೆ ಎಂದು ಭಾವಿಸಿ ಆರೋಪಿಗಳ ಖಾತೆಗೆ 25 ಸಾವಿರ ರೂಪಾಯಿ ಹಣವನ್ನು ಜಮೆ ಮಾಡಿದ್ದಾರೆ. ಈ ನಡುವೆ ತನ್ನ ಇ-ಮೇಲ್ ಖಾತೆ ಹ್ಯಾಕ್ ಮಾಡಿ ದುರ್ಬಳಕೆ ಮಾಡಲಾಗುತ್ತಿದೆ ಎಂಬುದು ಶಂಕರ್ ಬಿದರಿ ಅವರ ಗಮನಕ್ಕೆ ಬಂದಿದ್ದು ಕೂಡಲೇ ಈ ಬಗ್ಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಆಧಾರದಲ್ಲಿ ಆರೋಪಿಗಳಿಗೆ ಬಲೆ ಬೀಸಿದ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಓರ್ವ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.ಆರೋಪಿಗಳು ಕಳೆದ ವರ್ಷ ನವೆಂಬರ್‍ನಿಂದ ಈವರೆಗೆ ಸುಮಾರು 60 ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಈ ಆರೋಪಿಗಳು ಬ್ಯಾಂಕ್ ಖಾತೆ ತೆರೆಯಲು ನಾಗಾಲ್ಯಾಂಡ್‍ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಇನ್ನು ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿರುವ ಬ್ಯೂಟಿ ಪಾರ್ಲರ್​ವೊಂದರಲ್ಲಿ  ಸೇಲ್ಸ್ ಗರ್ಲ್ ರುಬಿಕಾ ಫೇಸ್‍ಬುಕ್‍ನಲ್ಲಿ ಪೀಟರ್ ಮತ್ತು ಜೇಮ್ಸ್ ಎಂಬವರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸೇರಿ ಅಕೌಂಟ್ ಹ್ಯಾಕ್ ಮಾಡಿ ಹಣ ದೋಚುತ್ತಿದ್ದಳು ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು