Monday, January 20, 2025
ಬೆಂಗಳೂರು

ಡ್ರಗ್ಸ್ ನಂಟಿನ ಆರೋಪ ; ಸಂಜನಾ, ರಾಗಿಣಿಗೆ ಮತ್ತೆ ಸಂಕಷ್ಟ -ಕಹಳೆ ನ್ಯೂಸ್

ಬೆಂಗಳೂರು : ಡ್ರಗ್ಸ್ ನಂಟಿನ ಆರೋಪಕ್ಕೆ ತುತ್ತಾಗಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿ ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆ ಹೆಚ್ಚಾಗಿದ್ದು, ಇಬ್ಬರು ನಟಿಯರು ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಗ್‍ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಡ್ರಗ್ಸ್ ನಂಟಿನ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಮಸ್ತಾನ್ ಚಂದ್ರ ಆಯೋಜಿಸಿದ ಪಾರ್ಟಿಗಳಲ್ಲಿ ಈ ಇಬ್ಬರು ನಟಿಯರು ಭಾಗವಹಿಸಿದ್ದರು. ಈ ಕುರಿತ ವೀಡಿಯೊ ಸಾಕ್ಷ್ಯ ಪೊಲೀಸರಿಗೆ ದೊರೆತಿದೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು