Monday, January 20, 2025
ಸುದ್ದಿ

ಕಿನ್ನಿಗೋಳಿಯಲ್ಲಿ ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ, ಪರಿಕರಗಳು ಪತ್ತೆ-ಕಹಳೆ ನ್ಯೂಸ್

ಮಂಗಳೂರು : ತುಳುನಾಡು ಕೃಷಿ ಸಂಸ್ಕøತಿಯ ನಾಡು , ದೈವ ದೇವರ ನೆಲೆಬೀಡು. ತುಳುನಾಡಿನ ಮನೆ ಮನೆಗಳ ಚಾವಡಿಗಳಲ್ಲಿ ದೈವ-ದೇವರುಗಳ ನಂಬಿಕೆಯ ತೂಗು ಮಂಚವಿರುತ್ತದೆ. ಹೀಗಾಗಿ ತುಳುನಾಡಿನ ಪುಣ್ಯಭೂಮಿಯಲ್ಲಿ ದೈವ ಭಕ್ತಿಯ ಕಾರಣಿಕ ಅಲ್ಲಲ್ಲಿ ಬೆಳಕಿಗೆ ಬರುತ್ತಲೇ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಿನ್ನಿಗೋಳಿಯಲ್ಲಿ ಮುಚ್ಚಿ ಹೋದ ಬಾವಿ ಉತ್ಖನನದ ವೇಳೆ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾದ ಘಟನೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಹಲವಾರು ತೊಂದರೆ ಎದುರಿಸುತ್ತಿದ್ದ ಈ ಕುಟುಂಬದವರು ಕೊನೆಗೆ ದೈವ – ದೇವರುಗಳ ಮೊರೆ ಹೋಗಿದ್ದು, ದೈವ ದರ್ಶನದ ವೇಳೆ ‘ಹಿಂದೆ ಮುಚ್ಚಿ ಹೋಗಿರುವ ಬಾವಿ ಅಗೆದು ನೋಡಿ’ ಎಂದು ನುಡಿ ನೀಡಿದೆ. ಕಾಲ ಕ್ರಮೇಣ ಜೀರ್ಣಾವಸ್ಥೆಗೆ ತಲುಪಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮೂಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ನೀಡಿದ್ದ ನುಡಿ ಸತ್ಯವಾಗಿದೆ. ಈ ಘಟನೆ ಕಿನ್ನಿಗೋಳಿ ಸಮೀಪದ ಬಳ್ಕುಂಜೆಯ ಮೂಡಾಯಿಗುತ್ತು ಮನೆಯಲ್ಲಿ ನಡೆದಿದ್ದು, ಮುಚ್ಚಿ ಹೋದ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ. ಮೂಡಾಯಿಗುತ್ತು ಮನೆಯವರು, ಸತ್ಯ ದೇವತೆ, ಅಣ್ಣಪ್ಪ ಪಂಜುರ್ಲಿ ಜೀರ್ಣೋದ್ಧಾರ ಮಾಡಿದ್ದು, ಈ ವೇಳೆ ದಿವಾಕರ ಪೂಜಾರಿ ಅವರ ದರ್ಶನದಲ್ಲಿ ದೈವದ ನುಡಿಯಲ್ಲಿ ಬಾವಿ ತೋಡುವಂತೆ ಹೇಳಿದ್ದಾರೆ. ಇದರಂತೆ ಮುಚ್ಚಿ ಹೋದ ಬಾವಿಯನ್ನು ಮತ್ತೆ ತೋಡಿದಾಗ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ, ಆಭರಣ, ಕತ್ತಿ ದೊರಕಿದೆ. ಇನ್ನು ದೈವದ ನುಡಿದಂತೆ ಸಿಕ್ಕ ದೈವ ಪರಿಕರ ಕಂಡ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದು, ದೈವದ ಕಾರ್ಣಿಕಕ್ಕೆ ಸ್ಥಳೀಯರು ಭಕ್ತಿ ಭಾವದಿಂದ ನಮಿಸುತ್ತಿದ್ದಾರೆ.