Saturday, November 23, 2024
ಸುದ್ದಿ

ಕೋವಿಡ್ ಸಂದರ್ಭದಲ್ಲಿ ದ್ವಿಪಾತ್ರದಲ್ಲಿ ಮಹಿಳೆ ; ಡಾ. ಮೀನಾ ಆರ್. ಚಂದಾವರ್ಕರ್-ಕಹಳೆ ನ್ಯೂಸ್

ಮಂಗಳೂರು : ಕೋವಿಡ್ ಸಾಂಕ್ರಾಮಿಕವು ‘ವರ್ಕ್ ಫ್ರಮ್ ಹೋಮ್’ ಎನ್ನುವ ಹೊಸ ಚಿಂತನೆಗೆ ನಾಂದಿ ಹಾಡಿದ್ದು ಉದ್ಯೋಗಸ್ಥ ಮಹಿಳೆ ದ್ವಿಪಾತ್ರದಲ್ಲಿ ಸಮರ್ಥ ನಾಯಕತ್ವ ಗುಣ ಪ್ರದರ್ಶಿಸಿದ್ದಾಳೆ, ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನಾಗಪುರದ ಭಾರತೀಯ ಶಿಕ್ಷಣ ಮಂಡಲದ ಜೊತೆಕಾರ್ಯದರ್ಶಿ ಡಾ.ಮೀನಾ ಆರ್ ಚಂದಾವರ್ಕರ್ ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ)ದ ಮಂಗಳೂರು ವಿಶ್ವವಿದ್ಯಾಲಯ ವಿಭಾಗ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದʼ ಉನ್ನತಶಿಕ್ಷಣ ದಲ್ಲಿ ಮಹಿಳೆಯ ಪಾತ್ರʼ ಎಂಬ ರಾಷ್ಟ್ರಮಟ್ಟದ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ, 2018-19ನೇ ಸಾಲಿನಲ್ಲಿ ಭಾರತದ ಉನ್ನತ ಶಿಕ್ಷಣದಲ್ಲಿ ಗಂಡು-ಹೆಣ್ಣು ಲಿಂಗಾನುಪಾತ ಸಮವಾಗಿರುವುದು ಸಂತಸದ ಸಂಗತಿ, ಎಂದರು. ಮುಖ್ಯ ಅತಿಥಿ, ಸಾಹಿತ್ಯ ಅಕಾಡೆಮಿ ನವದೆಹಲಿ ಸಲಹಾ ಸಮಿತಿ ಸದಸ್ಯೆ ಡಾ.ಗೀತಾ ಆರ್ ಶೆಣೈ, ಭಾರತದಲ್ಲಿ ಕ್ರಾಂತಿಯ ರೀತಿ ಸ್ತ್ರಿ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿರುವುದು ಮಹಿಳೆಯರೇ. ಮಹಿಳಾ ಸಬಲೀಕರಣಕ್ಕೆ ಸರಕಾರವೂ ಪೂರಕವಾಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದು ಗ್ರಾಮೀಣರಿಗೆ ಆಶಾದಾಯಕವಾಗಿದೆ. ಆದರೂ ಆರ್ಥಿಕ ಹೊರೆತಪ್ಪಿಸಿಕೊಳ್ಳಲು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮದುವೆ ಮಾಡುತ್ತಿರುವುದು ಆಘಾತಕಾರಿಯಾಗಿದೆ, ಎಂದು ಆತಂಕ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಹಾಗೂ ಕೆಆರ್ಎಂಎಸ್ಎಸ್ ಮಹಿಳಾ ಪ್ರಮುಖ ವನಜಾ ಶ್ರೀರಾಮ್, ಮಹಿಳಾ ಸಬಲೀಕರಣ ಅಂದರೆ ಪುರುಷರನ್ನು ದ್ವೇಷಿಸುವುದಲ್ಲ ಬದಲಿಗೆ ಅವರೊಂದಿಗೆಸಮನಾಗಿ ಕೆಲಸ ಮಾಡುವುದು, ಎಂದರು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆಡಾ. ಸುಭಾಷಿಣಿ ಶ್ರೀವತ್ಸ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೆಬಿನಾರ್ ನಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ್ ಶಾಪುರ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರವಿಚಂದ್ರ, ಧಾರವಾಡ ವಿಭಾಗದ ಡಾ.ಗುರುನಾಥ ಬಡಿಗೇರ ಮೊದಲಾದವರು ಉಪಸ್ಥಿತರಿದ್ದರು. ವೆಬಿನಾರ್ನ ಸಂಯೋಜಕಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ಖಜಾಂಜಿ ಕಾವ್ಯಾ ಪಿ ಹೆಗ್ಡೆ ಸ್ವಾಗತಿಸಿದರು, ಡಾ. ಸಂಗೀತಾ ಕಟ್ಟಿಮನಿ ವಂದಿಸಿದರು. ಕ್ಷಿತಿಜಾ ಕಾರ್ಯಕ್ರಮ ನಿರೂಪಿಸಿದರು.