Recent Posts

Sunday, January 19, 2025
ಸುದ್ದಿ

ಶಿಕ್ಷಕ ಆರ್ಥಿಕತೆಯಲ್ಲಿ ಬಡವ ವೈಚಾರಿಕತೆಯಲ್ಲಿ ಶ್ರೀಮಂತರು : ಡಾ| ಟಿ. ಕೃಷ್ಣಮೂರ್ತಿ

ಪುತ್ತೂರು : ‘ಯುವ ಜನತೆಯ ಜೊತೆ ಇರುವವರು ಯಾವಾಗಲೂ ಸೃಜನಾತ್ಮಕವಾಗಿ ಯೋಚಿಸುತ್ತಿರುತ್ತಾರೆ. ಶಿಕ್ಷಣ ಹುದ್ದೆಯೊಂದೇ ಈ ಭೂಮಿ ಮೇಲಿರುವ ಪ್ರಾಮಾಣಿಕ ಹುದ್ದೆ’ ಎಂದು ಎಸ್. ಡಿ. ಎಂ. ವಸತಿ ಕಾಲೇಜಿನ ಪ್ರಾಂಶುಪಾಲ ಟಿ. ಕೃಷ್ಣಮೂರ್ತಿ ಹೇಳಿದರು.

ಮಂಗಳವಾರ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ ಮೂರನೇ ದಿನ ಪೂರ್ವಾಹ್ನ ನಡೆದ ‘TEACHER- The index of fore finger’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಶಿಕ್ಷಕ ಯಾವತ್ತೂ ಒಬ್ಬ ಒಳ್ಳೆಯ ಕೇಳುಗನಾಗಿರಬೇಕು. ಶಿಕ್ಷಕರು ಆರ್ಥಿಕತೆಯಲ್ಲಿ ಬಡವ ವೈಚಾರಿಕತೆಯಲ್ಲಿ ಶ್ರೀಮಂತರು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಥೆಯ ಸಂಚಾಲಕ ಪಿ. ವಿ. ಗೋಕುಲ್‍ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿದ್ಯಾರ್ಥಿಗಳನ್ನು ಸೋಲಿನ ಕಡೆಯಿಂದ ಶಿಸ್ತಿನ ಜೊತೆ ಜೊತೆಗೆ ಗೆಲುವಿನ ಮೆಟ್ಟಿಲು ಹತ್ತಿಸುವುದು ನಮ್ಮ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಮನಸಾ ಕಾರ್ಯ ನಿರ್ವಹಿಸುತ್ತಿದ್ದೇವೆ’ ಎಂದು ಹೇಳಿದರು.


ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿವೇಕಾನಂದ ಶಿಕ್ಷಣ ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್ ಮಾತನಾಡಿ, ಮಕ್ಕಳ ಒಳಗಿರುವ ಆತ್ಮೋನ್ನತಿಯನ್ನು ಮಾಡಬೇಕಾಗಿದೆ. ಕಷ್ಟಗಳಿಗೆ ಹೆಗಲುಕೊಡುವ ಶಕ್ತಿಯನ್ನು ತುಂಬಬೇಕು. ನಮ್ಮಲ್ಲಿರುವಂತಹ ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಶಿಕ್ಷಣದಲ್ಲಿ ಅವಕಾಶ ಮಾಡಿಕೊಡಿ ಆವಾಗ ನಾವು ಗೆಲುವಿನ ಹಾದಿಯನ್ನು ಕಂಡುಕೊಳ್ಳಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್. ಕೆ. ರಾಮಚಂದ್ರ ಭಟ್ ಮಾತನಾಡಿ, ಐದು ಬೆರಳುಗಳ ಸಹಾಯವಿಲ್ಲದೇ ಹೇಗೆ ವಸ್ತುವೊಂದನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಶಿಕ್ಷಕ ವೃಂದವಿಲ್ಲದೇ ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಬೆಳೆಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‍ನಾಥ್ ಎಲ್ಲರನ್ನು ಹುರಿದುಂಬಿಸಿ, ಲಿಟ್ಲ್ ಫ್ಲವರ್ ಪ್ರೈಮರಿ ಶಾಲೆಯಿಂದ ಕಾರ್ಯಗಾರಕ್ಕೆ ಆಗಮಿಸಿದ ಎಲ್ಲಾ ಶಿಕ್ಷಕರಿಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಆಂಗ್ಲಭಾಷಾ ಉಪನ್ಯಾಸಕಿಯರಾದ ವಿಸ್ಮಿತ ಮಧುಕರ್ ಮುಳಿಬೈಲ್, ತನುಜಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ನವ್ಯ ಸ್ವಾಗತಿಸಿ, ವಿಜಯಶ್ರೀ ಪ್ರಾರ್ಥಿಸಿ, ವಿಸ್ಮಿತ ಮಧುಕರ್ ಮುಳಿಬೈಲ್ ವ್ಯಕ್ತಿ ಪರಿಚಯ ಮಾಡಿದರು. ಮಿನುತಾ ವಂದಿಸಿ, ಕನ್ನಡ ಉಪನ್ಯಾಸಕಿ ಪ್ರತಿಭಾ ರೈ ನಿರೂಪಿಸಿದರು.