Monday, January 20, 2025
ದಕ್ಷಿಣ ಕನ್ನಡಬೆಂಗಳೂರುಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ಯಥಾಸ್ಥಿತಿಗೆ ಹೈಕೋರ್ಟ್ ಆದೇಶ ; ಮಾಧ್ವ ಪದ್ದತಿಯಂತೆ ಶಿವರಾತ್ರಿ – ಕಹಳೆ ನ್ಯೂಸ್

ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿಯ ಕುರಿತಾಗಿ ಗೊಂದಲ ಏರ್ಪಟ್ಟಿತು. ಶಿವರಾತ್ರಿ ಆಚರಣೆ ಶೈವ ಮಾಧ್ವ ಪದ್ದತಿಯಂತೆ ನಡೆಯಬೇಕೆಂಬ ಜಟಾಪಟಿಯು ನಡೆದಿತ್ತು ಇದೀಗ ಉಮಾಮಹೇಶ್ವರಿ ಗುಡಿಯಲ್ಲಿ ಈ ಹಿಂದಿನಂತೆ ಪೂಜೆ ಅಭಿಷೇಕ ನಡೆಸುವುದಕ್ಕೆ ಮುಜರಾಯಿ ಇಲಾಖೆಗೆ ಹೈಕೊರ್ಟ್ ನಿರ್ದೇಶನ ನೀಡಿದೆ.

ಕಳೆದ ಹಲವು ವರ್ಷಗಳಿಂದ ಕುಕ್ಕೆಸುಬ್ರಮಣ್ಯದಲ್ಲಿ ಆಚರಣೆಗಳು ನಡೆಯುತ್ತಿದ್ದವು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ದ ನಾಗರೀಕ ಹಿತರಕ್ಷಣಾ ಸಮತಿಯವರು ಈ ಬಾರಿಯ ಶಿವರಾತ್ರಿಯ ಅಚರಣೆಯಲ್ಲಿ ಬದಲಾವಣೆ ಮಾಡಬೇಕು ಶೈವ ಪದ್ದತಿಯಂತೆ ವೈಭವದ ಶಿವರಾತ್ರಿ ಆಚರಣೆ ,ಜಾಗರಣೆಯು ಇರಬೇಕು ಅನ್ನುವ ಮನವಿಯನ್ನು ಅಯುಕ್ತರಿಗೆ ಕೊಟ್ಟಿದ್ದರು. ಈ ಮದ್ಯೆ ಒಂದಷ್ಟು ಗೊಂದಲಗಳು ಏರ್ಪಟ್ಟಿತು. ಇದಾದ ಬಳಿಕ ಮುಜರಾಯಿ ಇಲಾಖೆಯ ಅಯುಕ್ತರ ನೇತೃತ್ವದಲ್ಲಿ ಅಗಮಪಂಡಿತರು ಮತ್ತು ಆ ಕ್ಷೇತ್ರದ ಅರ್ಚಕರು ಎಲ್ಲ ಸೇರಿ ಸಭೆಯನ್ನು ನಡೆಸಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಗೆ ನಾಳೆಯ ಶಿವರಾತ್ರಿ ಅಚರಣೆಯನ್ನು ಮಾಡಬೇಕು ಜಾಗರಣೆಯನ್ನು ಮಾಡಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದರು.ಈ ಇದ್ದಕ್ಕೆ ಸಂಬಂಧಿಸಿದತೆ ಮುಜರಾಯಿ ಇಲಾಖೆಯ ಅಯುಕ್ತರು ಒಂದು ಅದೇಶವನ್ನು ಕೊಟ್ಟಿದ್ದರು ಈ ಅದೇಶದ ವಿರುದ್ದ ಮುರಳಿಧರ್ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೆರಿದ್ದರು ಈ ಅದೇಶ ಸರಿಯಲ್ಲ ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ವನ್ನು ಮುರಿದು ಈ ರೀತಿ ಅಚರಣೆಗಳನ್ನು ಮಾಡುವಂತದು ತಪ್ಪು ಅನ್ನುವಂತಹ ಅಭಿಪ್ರಾಯ ಕ್ಕೆ ಬಂದಿದ್ದರು. ಈ ಕಾರಣಕ್ಕೆ ನಿನ್ನೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು . ಇವತ್ತು ವಿಚಾರಣೆಗೆ ನಡೆದು ಮುಜರಾಯಿ ಅಯುಕ್ತರು ನೀಡಿರುವ ಅದೇಶಕ್ಕೆ ತಡೆಯಾಜ್ಞೆ ನೀಡಿ ಶಿವರಾತ್ರಿ ಆಚರಣೆ ಬದಲಿಸದಂತೆ ಹೈಕೊರ್ಟ್ ಅದೇಶ ನೀಡಿದೆ. ಈ ಹಿಂದೆ ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದರು ಅದೇ ರೀತಿಯಾಗಿ ಮುಂದುವರಿಸಬೇಕು ಅದರಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಸದ್ಯದ ಮಟ್ಟಿಗೆ ಮಾಡಬಾರದು ಅನ್ನುವುದನ್ನು ಹೈಕೊರ್ಟ್ ನಲ್ಲಿ ಅದೇಶದಲ್ಲಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀದೇವಳದಲ್ಲಿ ಉಮಾಮಹೇಶ್ಬರಗುಡಿಯಲ್ಲಿ ಈ ಹಿಂದಿನಂತೆ ಅನೂಚಾನವಾಗಿ ಬಂದಿರುವ ಪದ್ಧತಿಯಂತೆ ಡಿಟ್ಟಂ ಪ್ರಕಾರ ಪೂಜೆ ಅಭಿಷೇಕ ಉತ್ಸವಾದಿಗಳನ್ನು ನೆರವೇರಿಸುವುದು .
ಇದನ್ನು ಹೊರತು ಪಡಿಸಿ ಇತರ ಎಲ್ಲಾ ಅಂಶಗಳಿಗೂ ಅನ್ವಯವಾಗುವಂತೆ ಯಥಾಸ್ಥಿತಿ ಆದೇಶ ಹೇಳಿದೆ .
ಈ ವರ್ಷ ಶಿವರಾತ್ರಿಗೆ ಯಾವುದೇ ಬದಲಾವಣೆ ಮಾಡುವಂತಿಲ್ಲ.ಎರಡು ವಾರಗಳಿಂದ ನಡೆಯುತ್ತಿದ ಶೈವ ಮಾಧ್ವ ಸಿದ್ಧಾಂತ ಸಂಘರ್ಷಶಕ್ಕೆ ಹೈಕೋರ್ಟ್ ತೆರೆ ಎಳೆದಿದೆ.