Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಬೆಂಗಳೂರುರಾಜ್ಯಸುದ್ದಿ

ಪುತ್ತೂರು ನಗರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ರೂ. 9 ಕೋಟಿ ಪ್ರಸ್ತಾವನೆ ; ಶಾಸಕರು, ನಗರಸಭೆ, ಪೂಡಾ ಅಧ್ಯಕ್ಷರಿಂದ ಮುಖ್ಯಮಂತ್ರಿಗಳಿಗೆ ಮನವಿ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಸಂಪರ್ಕ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ರೂ.೯ ಕೋಟಿಯ ಪ್ರಸ್ತಾವನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ನಗರಸಭೆ ಪಟ್ಟಣ ಪ್ರದೇಶದಲ್ಲಿ ವಾಹನ ಸಂಚಾರ ನಿಯಂತ್ರಣಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿ, ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಸಕ್ಲೇಶಪುರ ಬೆಂಗಳೂರಿಗೆ ಹೋಗುವ ವಾಹನಗಳು ಪುತ್ತೂರು ಪಟ್ಟಣಕ್ಕೆ ಬಾರದೆ ಸಂಪರ್ಕ ರಸ್ತೆ ಮಾಡುವುದು ಸೇರಿ ರೂ. ೨.೬೦ ಕೋಟಿಯ ಪ್ರಸ್ತಾವನೆ ಮತ್ತು ನೆಹರುನಗರ ವಿವೇಕಾನಂದ ಕಾಲೇಜಿಗೆ ಹೋಗುವಲ್ಲಿ ಕಿರಿದಾದ ರೈಲ್ವೇ ಸೇತುವೆಯನ್ನು ಅಗಲೀಕರಣಗೊಳಿಸುವ ಕುರಿತು ವಿಶೇಷ ಪ್ರಯತ್ನ ಮಾಡುವಂತೆ ರೂ. ೬ ಕೋಟಿಯ ಪ್ರಸ್ತಾವನೆಗೆ ಮನವಿಯಲ್ಲಿ ತಿಳಿಸಲಾಗಿದ್ದು, ಒಟ್ಟು ರೂ. ೯ ಕೋಟಿಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ರಾಜೇಶ್ ನಾಯಕ್, ವಿಧಾನಪರಿಷತ್‌ನ ಉಪಸಭಾಪತಿ ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಂತಾರಾಮ, ರಾಮ್‌ದಾಸ್, ವಿವೇಕಾನದ ಸಂಸ್ಥೆಯ ಲಕ್ಷ್ಮೀಶ ಬೊಟ್ಯಾಡಿ ಉಪಸ್ಥಿತರಿದ್ದರು.