Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸಿನಿಮಾಸುದ್ದಿ

ಕುಂಪಲದ ರೂಪದರ್ಶಿ ಅಸಹಜ ಸಾವು – ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ; ಗಾಂಜಾ ಗ್ಯಾಂಗಿನಿಂದ ಕೊಲೆ ಶಂಕೆ..! – ಕಹಳೆ ನ್ಯೂಸ್

ಉಳ್ಳಾಲ, ಮಾ. 10: ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿ ಅಸಹಜ ರೀತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಯಾರೋ ಕೊಲೆಗೈದಿರುವ ಪ್ರಬಲ ಶಂಕೆ ವ್ಯಕ್ತವಾಗಿದೆ.

ಕುಂಪಲ ಆಶ್ರಯ ಕಾಲನಿಯ ಮನೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯ ಗಾಂಜಾ ವ್ಯಸನಿಗಳು ಯುವತಿಯನ್ನು ಕೊಲೆ ಮಾಡಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂಪಲ ಆಶ್ರಯ ಕಾಲನಿ ನಿವಾಸಿ ಪ್ರೇಕ್ಷಾ (19) ಮೃತ ದುರ್ದೈವಿ. ಎಚ್ ಪಿ ಗ್ಯಾಸ್ ಏಜನ್ಸಿಯಲ್ಲಿ ಕಾರ್ಮಿಕರಾಗಿರುವ ಚಿತ್ತಪ್ರಸಾದ್ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವನಿತಾ ದಂಪತಿಯ ಕಿರಿಯ ಪುತ್ರಿ ಪ್ರೇಕ್ಷಾ ಇಂದು ಮಧ್ಯಾಹ್ನ ಮನೆಯ ರೂಮಿನಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆಗೈದಿರುವ ರೀತಿ ಕಂಡುಬಂದಿದೆ. ಆದರೆ, ಬೆಡ್ ಮೇಲೆ ನಿಂತ ಭಂಗಿಯಲ್ಲಿ ಶವ ಇದ್ದು ಕೊಲೆಗೈದು ನೇತು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ ಚಿತ್ತ ಪ್ರಸಾದ್ ಮತ್ತು ತಾಯಿ ಕೆಲಸಕ್ಕೆ ತೆರಳಿದ್ದು ಪ್ರೇಕ್ಷಾಳ ಅಕ್ಕ ಪ್ರತೀಕ್ಷಾ ಕಾಲೇಜಿಗೆ ತೆರಳಿದ್ದಳು. ಹೀಗಾಗಿ ತಂಗಿ ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ಸ್ಥಳೀಯ ಮಹಿಳೆಯೋರ್ವಳಿಗೆ ಘಟನೆ ಗೊತ್ತಾಗಿದ್ದು ಪ್ರೇಕ್ಷಾ ಬಗ್ಗೆ ಆಕೆಯ ತಾಯಿಗೆ ಮಾಹಿತಿ ನೀಡಿದ್ದಾರೆ. ತಾಯಿ ಮಧ್ಯಾಹ್ನ ಮನೆಗೆ ಬಂದಾಗ ಸಾವಿನ ವಿಚಾರ ಬೆಳಕಿಗೆ ಬಂದಿದೆ.

ಸ್ಥಳೀಯರಾದ ಸೌರವ್, ಯತೀರಾಜ್, ಭವಿತ್ ಎಂಬ ಮೂವರು ಯುವಕರು ಪ್ರೇಕ್ಷಾಳ ಮನೆ ಕಡೆಗೆ ಸ್ಕೂಟರಲ್ಲಿ ಬಂದಿರುವುದನ್ನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೋರ್ವ ಸ್ಥಳೀಯ ಯುವಕನ ಬಗ್ಗೆಯೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭವಿತ್ ಸ್ಥಳೀಯ ಕಾಂಗ್ರೆಸ್ ಮುಖಂಡನ ಮಗನಾಗಿದ್ದು ಗಾಂಜಾ ವ್ಯಸನಿಯಾಗಿದ್ದ. ಪ್ರೇಕ್ಷಾ ರೂಪದರ್ಶಿಯಾಗಿದ್ದು ಇಂದು ಮಧ್ಯಾಹ್ನ ಪೋಟೋ ಶೂಟ್ ಗೆ ಬೆಂಗಳೂರಿಗೆ ತೆರಳುವ ಸಿದ್ದತೆಯಲ್ಲಿದ್ದಳು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.