ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲಿಗೆ ಗಾಯ ; ಇದೆಲ್ಲಾ ಡ್ರಾಮಾ ಎಂದ ಬಿಜೆಪಿ, ಕಾಂಗ್ರೆಸ್-ಕಹಳೆ ನ್ಯೂಸ್
ನವದೆಹಲಿ : ಬಿಜೆಪಿಯ ಸುವೇಂದು ಅಧಿಕಾರಿ ಮತ್ತು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹೈವೋಲ್ಟೇಜ್ ಸ್ಪರ್ಧೆಯಾಗಿ ಪಶ್ಚಿಮ ಬಂಗಳದ ನಂದಿ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ ನಡೆದ ದಾಳಿಯಲ್ಲಿ ಮಮತಾ ಬ್ಯಾನರ್ಜಿ ಅವರ ಎಡ ಕಾಲು ಮತ್ತು ಪಾದದ ಮೇಲೆ ತೀವ್ರವಾದ ಗಾಯಗಳಾಗಿದ್ದು, ಭುಜ, ಕುತ್ತಿಗೆ ಮೇಲೆ ಗಾಯಗಳಾಗಿವೆ ಎಂದು ಆಸ್ಪತ್ರೆ ವೈದ್ಯರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಬಳಿಕ ದೀದಿ ಅವರ ಬಿರುಲಿಯಾ ಬಜಾರ್ ನಲ್ಲಿ ನಾಗರಿಕರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅಲ್ಲಿಂದ ತಮ್ಮ ಕಾರಿಗೆ ಹತ್ತುತ್ತಿದ್ದಂತೆ ಏಕಾಏಕಿ ಕೆಲವು ವ್ಯಕ್ತಿಗಳು ತಳ್ಳಾಟ ನಡೆಸಿದ್ದಾರೆ. ಇದರಿಂದ ಮಮತಾ ಅವರ ಕಾಲಿಗೆ ಏಟಾಗಿದೆ. ಆರಂಭಿಕ ಪರೀಕ್ಷೆಯಲ್ಲಿ ಎಡಗಾಲು ಹಾಗೂ ಪಾದದಲ್ಲಿ ತೀವ್ರ ಪೆಟ್ಟು ಬಿದ್ದಿದ್ದು, ಇದರ ಜೊತೆಗೆ ಭುಜ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಸದ್ಯ ಅವರನ್ನು 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ಮಮತಾ ಅವರ ಗಾಯದ ಕುರಿತಂತೆ ಮಾಧ್ಯಮಗಳಿಗೆ ಎಸ್‍ಎಸ್‍ಕೆಎಂ ಆಸ್ಪತ್ರೆಯ ಡಾ.ಎಂ.ಬಂಡೋಪಾಧ್ಯಾಯ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮೇಲೆ ಹಲ್ಲೆ ನಡೆದು, ಆಸ್ಪತ್ರೆಗೆ ದಾಖಲಾದ ಬಳಿಕ, ಇದೊಂದು ‘ರಾಜಕೀಯ ಬೂಟಾಟಿಕೆ’ ಎಂದು ಕಾಂಗ್ರೆಸ್ಸಿನ ಪಶ್ಚಿಮ ಬಂಗಾಳದ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ. ಅವರು ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಗೃಹ ಸಚಿವರೂ ಹೌದು. ಗೃಹ ಸಚಿವರ ಜತೆ ಪೆÇಲೀಸರೇ ಇರಲಿಲ್ಲ ಎಂದರೆ ನಂಬಲು ಸಾಧ್ಯವಿಲ್ಲ. ಬಂಗಾಳದ ಸಿಎಂ ಜನರ ಭಾವನೆಗಳೊಂದಿಗೆ ಆಡಲು ಪ್ರಯತ್ನಿಸುತ್ತಿದ್ದಾರೆ ಎಂದು ಚೌಧರಿ ಟೀಕಿಸಿದ್ದಾರೆ. ಇನ್ನು ಬಿಜೆಪಿ ಕೂಡಾ ದೀದಿ ಮೇಲೆ ನಡೆದ ಹಲ್ಲೆಯನ್ನು ಡ್ರಾಮಾ ಎಂದಿದೆ. ಘಟನೆ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಮತಾರ ಚಿತ್ರವೊಂದನ್ನು ಟ್ವಿಟರ್‍ನಲ್ಲಿ ಹಂಚಿಕೊಳ್ಳುವ ಮೂಲಕ ಅವರ ಅಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಬಿಜೆಪಿಗೆ ನೇರ ಸವಾಲು ಹಾಕಿದ್ದಾರೆ.