ಮಹಾಶಿವರಾತ್ರಿಯಾದ ಇಂದು ಸ್ನಾನಕ್ಕೆ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಗಂಗಾ ನದಿಯಲ್ಲಿ ಮುಳುಗಿ ಮೃತ್ಯು-ಕಹಳೆ ನ್ಯೂಸ್
ಲಕ್ನೋ : ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಹಾಶಿವರಾತ್ರಿಯಾದ ಇಂದು ಇಬ್ಬರು ಶಿವಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಶಿವ ಭಕ್ತರು ಕನ್ವರಿಯಸ್ ಗುಂಪಿನ ಭಾಗವಾಗಿದ್ದ 22ವರ್ಷದ ಸುಬೋಧ್ ಕುಮಾರ್ ಹಾಗೂ 21ವರ್ಷದ ಅಮರ್ಜೀತ್ ಎಂದು ಗುರುತಿಸಲಾಗಿದೆ. ಇಬ್ಬರು ಯಾರ್ಥಿಕರು ಉಶೈತ್ನ ಅಟೀನಾ ಗಂಗಾ ಘಾಟ್ಗೆ ಸ್ನಾನ ºಗೂ ಪವಿತ್ರ ಜಲ ಸಂಗ್ರಹಿಸಲು ಹೋಗಿದ್ದರು. ಮಹಾಶಿವರಾತ್ರಿ ಹಬ್ಬವಾದ ಇಂದು ಶಿವನಿಗೆ ಪವಿತ್ರ ಜಲವನ್ನು ಅರ್ಪಿಸಲು ಅವರು ಗಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದರು. ಆದರೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಶವವನ್ನು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.