Saturday, November 23, 2024
ಕಾಸರಗೋಡು

ಶಬರಿಮಲೆಯಲ್ಲಿ ಮಾರ್ಚ್ 14 ರಿಂದ ಮೀನ ಮಾಸ ಪೂಜೆ-ಕಹಳೆ ನ್ಯೂಸ್

ಕಾಸರಗೋಡು : ಮೀನ ಮಾಸ ಪೂಜೆಗಾಗಿ ಶಬರಿಮಲೆಯ ವರ್ಚುವಲ್ ಕ್ಯೂ ಬುಕ್ಕಿಂಗ್ ಆರಂಭಗೊಂಡಿದ್ದು, ಅದರಂತೆ ಪ್ರತೀ ದಿನ 5000 ಮಂದಿ ಯಾತ್ರಿಕರಿಗೆ ಅವಕಾಶ ಕಲ್ಪಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಶಬರಿಮಲೆಗೆ ಆಗಮನಕ್ಕಿಂತ 24 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ಮಾರ್ಚ್ 14 ರಂದು ಮೀನ ಮಾಸ ಪೂಜೆಗಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಾಲಯದ ನಡೆ ತೆರೆಯಲಾಗುವುದು. ಮೀನ ಮಾಸ ಪೂಜೆಯ ಜೊತೆಗೆ ಶಬರಿಮಲೆ ಉತ್ಸವವು ಜರಗಲಿದೆ. ಈ ನಿಟ್ಟಿನಲ್ಲಿ ಮಾರ್ಚ್ 19 ರಂದು ಧ್ವಜಾರೋಹಣ, ಮಾರ್ಚ್ 27 ರಂದು ವಳ್ಳಿವೇಟ, ಮಾರ್ಚ್ 28 ರಂದು ಬೆಳಗ್ಗೆ ಪಂಪಾದಲ್ಲಿ ಆರಾಟು ಮಹೋತ್ಸವ ನಡೆಯಲಿದೆ. ಹಾಗೆಯೇ ಇದೇ ವೇಳೆ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ತಿರುವಿದಾಂಕೂರು ದೇವಸ್ವಂ ಮಂಡಳಿಯು ಕೇರಳ ಸರಕಾರವನ್ನು ಆಗ್ರಹಿಸಿದೆ. ಆದರೆ ಸರಕಾರವು ಇದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೇ ವೇಳೆ ಶಬರಿಮಲೆಗೆ ಆಗಮಿಸುವ ಭಕ್ತರ ಸಂಖ್ಯೆಯನ್ನು ಹೆಚ್ಚಿಸಬೇಕೆಂದೂ ದೇವಸ್ವಂ ಮಂಡಳಿ ಒತ್ತಾಯಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು