ಹತ್ತೂರ ಒಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಸಂಭ್ರಮ ; ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದ ದೇವಸ್ಥಾನ, ಅಧಿಕಗೊಂಡ ಭಕ್ತರ ಸಂಖ್ಯೆ – ಕಹಳೆ ನ್ಯೂಸ್
ಪುತ್ತೂರು : ಅಭಿಷೇಕ ಪ್ರಿಯ ಎಂದೇ ಖ್ಯಾತನಾದ ಶಿವನಿಗೆ ಮಾರ್ಚ್ 11ರಂದು ಶಿವರಾತ್ರಿಯ ಸಂಭ್ರಮ. ಲಿಂಗರೂಪಿ ಶಿವನನ್ನು ಆರಾಧಿಸುವ ಪುಣ್ಯದಿನ. ಮಹಾಶಿವರಾತ್ರಿಯ ದಿನದಂದು ಈಶ್ವರನ ದೇವಾಲಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತಿದ್ದು, ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಸಂಜೆ ಶ್ರೀ ದೇವರ ಬಲಿ ಉತ್ಸವ ಹೊರಟು ಪಲ್ಲಕಿ ಸೇವೆ, ರಾತ್ರಿ ರಥೋತ್ಸವ. ಕೆರೆ ಉತ್ಸವ ನಡೆಯಿತು.
ಪ್ರದಕ್ಷಿಣೆ ಸೇವೆಯಲ್ಲಿ ಅಧಿಕಗೊಂಡ ಭಕ್ತರು:
ಶಿವರಾತ್ರಿ ಅಂಗವಾಗಿ ಪ್ರಾತಃಕಾಲದಿಂದಲೇ ಭಕ್ತರ ಸಂದಣಿ ಇತ್ತು. ಸೇವೆ ಹಾಗೂ ಪ್ರಸಾದ ಸ್ವೀಕರಿಸಲು ಸರದಿಯ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಮಹಾಶಿವರಾತ್ರಿಯ ಪ್ರಯುಕ್ತ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಶ್ರೀ ದೇವರಿಗೆ ಪ್ರದಕ್ಷಿಣೆ ಹಾಕಿದರು.
ಮಹಾಶಿವರಾತ್ರಿಯಂದು ರಾತ್ರಿ ಉತ್ಸವ ಸಂದರ್ಭ ನೂರಾರು ಭಕ್ತರು ಶ್ರೀ ದೇವಳದ ಒಳಾಂಗಣದಲ್ಲಿ ಪ್ರದಕ್ಷಿಣೆ ಸೇವೆ ಸಲ್ಲಿಸಿದರು. ವರ್ಷದಿಂದ ವರ್ಷಕ್ಕೆ ಪ್ರದಕ್ಷಿಣೆ ಸೇವೆ ಸಲ್ಲಿಸುವವರ ಸಂಖ್ಯೆ ಅಧಿಕಗೊಂಡಿತ್ತು.
ದೇವಸ್ಥಾನದ ರಾಜಗೋಪುರ ಬಣ್ಣ ಬಣ್ಣದ ವಿದ್ಯುದೀಪಾಲಕೃತಗೊಂಡು ಜಗಮಗಿಸಿದ್ದು ಆಕರ್ಷಿತವಾಗಿತ್ತು. ದೇವಳದ ಸುತ್ತು ಪೌಳಿ, ರಾಜಾಂಗಣ ವಿದ್ಯುತ್ ದೀಪಾಲಕೃತಗೊಂಡಿತ್ತು. ರಥವನ್ನು ವಷರ್ಂಪ್ರತಿಯಂತೆ ಗೋವರ್ಧನ್ ಅವರು ಶೃಂಗರಿಸಿದರು.
ಕೆರೆಯ ಸುತ್ತು ಮತ್ತು ದೇವರು ಸವಾರಿ ಮಾಡುವ ತೆಪ್ಪವನ್ನು ವಿದ್ಯುತ್ ದೀಪಾಲಕೃಂತದಿಂದ ಅಲಂಕರಿಸಲಾಗಿತ್ತು. ಧ್ಯಾನರೂಢ ಶಿವನ ಪ್ರತಿಮೆಯ ಸುತ್ತ ಶುಚಿತ್ವಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.