ಉಪ್ಪಿನಂಗಡಿ ಮಹಾಶಿವರಾತ್ರಿ ಮಖೆ ಪ್ರಯುಕ್ತ ಯಶಸ್ವಿಯಾಗಿ ನಡೆದ ವಿಶೇಷ ನಾಮಸಂಕೀರ್ತನಾ ಕಾರ್ಯಕ್ರಮ ; ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯವಾದಿ ಮಹೇಶ್ ಕಜೆ – ಕಹಳೆ ನ್ಯೂಸ್
ಉಪ್ಪಿನಂಗಡಿ : ಭಕ್ತಿ ಮಾರ್ಗದಲ್ಲಿ ಭಜನೆಗೆ ಮಹತ್ವದ ಸ್ಥಾನವಿದ್ದು, ಭಗವಂತನನ್ನೇ ಭಕ್ತನೆಡೆಗೆ ಕರೆಯಲ್ಪಡುವ ಶಕ್ತಿಶಾಲಿ ಮಾದ್ಯಮವಾಗಿದೆ. ನಾಮ ಸಂಕೀರ್ತನೆಯ ಬಲವನ್ನು ನಾರದರು ಸ್ವತಃ ಶ್ರೀ ರಾಮನ ಆಸ್ಥಾನದಲ್ಲಿ ಸಾದರ ಪಡಿಸಿದ್ದು, ತನ್ಮಯತೆಯ ನಾಮ ಸಂಕೀರ್ತನೆಯು ಭಕ್ತ ಮತ್ತು ಭಗವಂತನ ನಡುವಿನ ಬಲವಾದ ಭಾಂಧ್ಯವದ ಪ್ರತೀಕವಾಗಿದೆ ಎಂದು ವಕೀಲ ಮಹೇಶ್ ಕಜೆ ಹೇಳಿದರು.
ಅವರು ಮಾರ್ಚ್ 11ರಂದು ಉಪ್ಪಿನಂಗಡಿಯ ಉದ್ಬಲಿಂಗದ ಬಳಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಸಹಕಾರದಿಂದ ಆಯೋಜಿಸಲ್ಪಟ್ಟ ಶಿವರಾತ್ರಿ ಜಾಗರಣೆಯ ನಾಮಸಂಕೀರ್ತನಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿ ಮತನಾಡಿದರು. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ ಶಿವರಾತ್ರಿ ಜಾಗರಣೆಯನ್ನು ಶಿವನಾಮ ಸಂಕೀರ್ತನೆಯೊಂದಿಗೆ ಅರ್ಥಪೂರ್ಣಗೊಳಿಸಿದ ಕಾರ್ಯಕ್ರಮವಾಗಿದೆ ಎಂದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಅಧ್ಯಕ್ಷ ಐ. ಚಿದಾನಂದ ನಾಯಕ್, ನಾಮ ಸಂಕೀರ್ತನೆಯ ಸಂಯೋಜಕ ಐ. ಪುರುಷೋತ್ತಮ ನಾಯಕ್, ಪೂರ್ವಾಧ್ಯಕ್ಷ ಯು. ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ| ಯತೀಶ್ ಶೆಟ್ಟಿ, ಹೇರಂಭ ಶಾಸ್ತ್ರಿ, ಮಾಧವ ಆಚಾರ್ಯ, ಉಪೇಂದ್ರ ಪೈ, ಶ್ಯಾಮಲಾ ಶೆಣೈ, ರಾಧಾ ನಿನ್ನಿಕ್ಕಲ್, ಸುನಿಲ್ ಎ, ಮಹೇಶ್ ಬಜತ್ತೂರು, ಹರಿರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಕೆ. ಸುಧಾಕರ ಶೆಟ್ಟಿ ಸ್ವಾಗತಿಸಿ, ಜಗದೀಶ್ ಶೆಟ್ಟಿ ವಂದಿಸಿದರು. ಪ್ರಶಾಂತ್ ನೆಕ್ಕಿಲಾಡಿ ಕಾರ್ಯಕ್ರಮ ನಿರೂಪಿಸಿದರು.
ಕಹಳೆ ನ್ಯೂಸ್ ನಲ್ಲಿ ಉಪ್ಪಿನಂಗಡಿ ಶಿವರಾತ್ರಿ ಮಖೆ ಕೂಟ ನೇರಪ್ರಸಾರ ನಡೆದಿತ್ತು.